![]() |
| ಪೋಷಕರ ಸಾವಯವ ತೋಟದ ಆಟದಲ್ಲಿ ಸಂಭ್ರಮಿಸುವ ಗಿರಿನಗರದ ಬಾಲೆ ಹರ್ಷಿತಾ |
![]() |
| ತಾರಸಿಯ ಮೇಲೆ ದಿನದಿನದಿಂದ ದಿನಕ್ಕೆ ಹಿಗ್ಗುವ ಚಂದ್ರನಂತೆ ಬೆಳೆಯುತ್ತಿರುವ ಸಿಹಿಗುಂಬಳ |
ಈ ನಿಟ್ಟಿನಲ್ಲಿ ನಿಮ್ಮ ತೋಟದಿಂದಲೇ ಊಟವ ಮಾಡಿ ಎಂಬ ಘೋಷಣೆಯಲ್ಲಿ ಹೊರಟವರು "ಗಾರ್ಡನ್ ಸಿಟಿ ಫಾರ್ಮರ್ಸ್" ಎಂಬ ಸಂಸ್ಥೆಯವರು. ಡಾ. ವಿಶ್ವನಾಥ ಕಡೂರು ಸಂಸ್ಥಾಪಿಸಿದ ಈ ಸಂಸ್ಥೆ ಈ ಕುರಿತು "ಊಟ From Your ತೋಟ" ಎಂಬ ಶಹರಿನ ಸಂತೆಯನ್ನು ನಗರದ ಬೇರೆ ಬೇರೆ ಮೂಲೆಗಳಲ್ಲಿ ಮೂರು ತಿಂಗಳಿಗೊಮ್ಮೆ ನಡೆಸುತ್ತಲೇ ಬಂದಿದೆ. ಈ ಬಾರಿ ೧೭ನೇ ಅಂತಹ ಸಂತೆಯು, ಬನಶಂಕರಿ ಮೊದಲನೇ ಹಂತದ ಶಂಕರನಾಗ ವೃತ್ತದ ಪಕ್ಕದ ಡೊಂಕಲ ಮೈದಾನದಲ್ಲಿ ಜೂನ್ ೧೨ ಭಾನುವಾರ, ಬೆಳಿಗ್ಗೆ ೧೦ರಿಂದ ಸಂಜೆ ೫ರ ತನಕ ಜರುಗಲಿದೆ.
೪೦ಕ್ಕೂ ಹೆಚ್ಚಿನ ಮಾರಾಟ ಮತ್ತು ಪ್ರದರ್ಶನ ಮಳಿಗೆಗಳು ಈ ಸಂತೆಯಲ್ಲಿ ಇರುತ್ತವೆ. ಸಾವಯವ ತೋಟಗಾರಿಕೆ, ತಾಳಿಕೊಳ್ಳಬಲ್ಲ ಬದುಕಿನ ಸುತ್ತಲಿನ ಆಹಾರ ಮತ್ತು ಜೀವನಕ್ರಮ ಇತ್ಯಾದಿಗಳು ಸೇರಿ ವಿಧವಿಧದ ಸಣ್ಣ ಹಿಡುವಳಿದಾರರ ಅಂಗಡಿಗಳನ್ನು ನೋಡುವುದೇ ಕಣ್ಣಿಗೆ ತಂಪು, ಜೊತೆಗೆ ಗಿಡ, ಬೀಜ, ಗೊಬ್ಬರ, ನವಣೆ, ಕುರುಕುಲು, ಕಸೂತಿ ಇತ್ಯಾದಿ ಇತ್ಯಾದಿಗಳನ್ನು ಕೊಳ್ಳುವವರೂ ಸಾಕಷ್ಟು ಮಂದಿ ಬರುತ್ತಾರೆ. ಸಾವಯವ ರೀತಿಯ ತಿಂಡಿ ಊಟಗಳ ತಯಾರಿ ಮತ್ತು ಮಾರಾಟವೂ ಇರುತ್ತದೆ.
ಪ್ರತೀ ಬಾರಿಯಂತೆ ಆದರ್ಶಪ್ರಾಯ ಗ್ರಾಮಾಂತರ ಸಾವಯವ ರೈತರೊಬ್ಬರಿಗೆ ಸನ್ಮಾನವಿರುತ್ತದೆ. "ಕಸದಿಂದ ರಸ" ಅಭಿಯಾನದ ಪ್ರದರ್ಶನ ಮತ್ತು ಪಾಠವಿರುತ್ತದೆ. ಚಿಣ್ಣರ ಕೈತೋಟ, ಸಾವಯವ ಗೊಬ್ಬರ ತಯಾರಿಯ ಕುರಿತಾದ ಉಚಿತ ತರಗತಿಗಳು, ಸಾವಯವ ತಾರಸಿ ತೋಟಗಾರಿಕೆಯ ಸುತ್ತ ಉಚಿತ ಸಲಹೆ, ಬೆಂಗಳೂರಿನ ಸಾವಯವ ತಾರಸಿ ತೋಟಗಾರರಿಂದ ಬೀಜ, ಗಿಡ ಮತ್ತು ಬೆಳೆಗಳ ಉಚಿತ ವಿತರಣೆ ಇತ್ಯಾದಿಗಳ ಮೂಲಕ ಹೆಚ್ಚಿನ ಸಂಖೆಯಲ್ಲಿ ಹೊಸಬರಾದ ಸಾವಯವ ತಾರಸಿ ತೋಟದವರನ್ನು ಆಕರ್ಷಿಸಲು ಪ್ರಾಮಾಣಿಕ ಪ್ರಯತ್ನವು ಎಂದಿನಂತೆ ನಡೆಯಲಿದೆ. ಈ ನಿಟ್ಟಿನಲ್ಲಿ ನಗರದ ಬೇರೆ ಬೇರೆ ಮೂಲೆಗಳಲ್ಲಿರುವ ಸ್ಥಳೀಯ ತಾರಸಿ ತೋಟಗಾರರ ಗುಂಪುಗಳು ಹೆಚ್ಚಿನ ಮಟ್ಟದ ಸ್ವಯಂಸೇವೆಯಲ್ಲಿ ಈ ಬಾರಿ ತೊಡಗಿಸಿಕೊಳ್ಳುತ್ತಿವೆ. ಇಲ್ಲಿಗೆ ಸ್ಥಳೀಯವಾದ ಬಸವನಗುಡಿ ಸಾವಯವ ತೋಟಗಾರರ ತಂಡ ಈ ಕುರಿತು ಮುಂಚೂಣಿಯಲ್ಲಿದೆ.
ಕಾಂಕ್ರೀಟ ಕಾಡಾಗಿ ಹೋದ ಬೆಂಗಳೂರಿನ ತಾರಸಿ ಮೇಲೆ ಎಲ್ಲರೂ ತೋಟವ ಮಾಡಿದರೆ ಬೆಂಗಳೂರು ಮತ್ತೆ ನಂದನವನವಾಗಿ ಕಂಗೊಳಿಸುತ್ತದೆ. ಅಲ್ಲದೇ ಆ ತೋಟದಿಂದ ಬಂದ ಬೆಳೆಯಲ್ಲೇ ಊಟವ ಮಾಡಿದರೆ ಆರೋಗ್ಯ, ನೆಮ್ಮದಿ, ಸಂತೋಷ, ತೃಪ್ತಿ ಹೆಚ್ಚುತ್ತದೆ. ಅಲ್ಲದೇ ಈ ತಾರಸಿ ತೋಟಗಾರರ ಸುತ್ತಲಿನ ಅಂತರ್ಜಾಲದ ಸಾಮಾಜಿಕ ತಾಣಗಳ ಮೂಲಕ ಹೊಸ ಸ್ನೇಹ ಸಂಬಂಧಗಳು, ಅಭಿವ್ಯಕ್ತಿಗಳು ಮತ್ತು ಸಂಭ್ರಮದ ಹಬ್ಬಗಳ ಆಚರಣೆಯಲ್ಲಿ ಜಡ್ಡುಗಟ್ಟಿದ ಬದುಕಿಗೆ ಹೊಸ ಧನಾತ್ಮಕ ಚಾಲನೆ ಸಿಗಲಿದೆ. ನಿಸರ್ಗ ಮತ್ತು ನಾಗರಿಕತೆಯ ಬದುಕನ್ನು ಸಮತೋಲನವಿಟ್ಟುಕೊಳ್ಳುವ ಕಲೆ ಕರತಲಾಮಲಕವಾಗುತ್ತದೆ.
![]() |
| ಸಾವಿರಕ್ಕೂ ಮೀರಿ ಸ್ಟ್ರಾಬೆರಿ ಗಿಡಗಳನ್ನು ಗಿರಿನಗರದ ಮನೆಯ ಮೇಲಿನ ತಾರಸಿಯಲ್ಲಿ ಬೆಳೆಸಿ ಬೆಂಗಳೂರಿನ ಮೂಲೆಮಲೆಗೆ ಹಂಚುವ ಸಂತಸದಲ್ಲಿ ಅಂಬಾ ಶ್ರೀಕಾಂತ್ |
ತಾರಸಿಯ ತೋಟ ಮಾಡುವುದು ಮಕ್ಕಳಾಟವಿದ್ದಂತೆ. ನಂಬಿಕೆಯಿಲ್ಲವೇ?! ಭಾನುವಾರ ಈ ಸಂತೆಗೆ ಬಂದು ನೋಡಿ, ಕೇಳಿ, ಮಾತಾಡಿ. ಈ ತಾರಸಿ ತೋಟದವರ ಸಂತಸದ ಸಂಭ್ರಮದ ಹಿಂದಿನ ಸರಳ ಸತ್ಯಗಳನೇಂಬ ನಿಗೂಢವನ್ನು ನೀವೇ ಬೇಧಿಸುವ ಆಟಕ್ಕೆ ಇಳಿಯಲು ಬನ್ನಿ, ನಿಮ್ಮವರನ್ನು ಕರೆತನ್ನಿ.
ಮುಖಪುಸ್ತಿಕೆಯಲ್ಲಿನ ಬೆಂಗಳೂರಿನ ತಾರಸಿತೋಟದವರು ಸೇರಿಕೊಂಡಿರುವ ಸಮೂಹಗಳಲ್ಲಿ ಕೆಲವು:
![]() |
| ಕತ್ರಿಗುಪ್ಪೆಯಲ್ಲಿ ತಾರಸಿ ಮೇಲೆ ತೋಟ ಸಾಕಾಗದೆಂದು ಕಾಡು ಮಾಡ ಹೊರಟ ತಾರಸಿ ತೋಟಿಗರೊಬ್ಬರು! |
ಊಟ From Your ತೋಟ ಅಭಿಯಾನ ಪ್ರಾರಂಭವಾದಾಗ ಬಂದ ಪತ್ರಿಕೆಯಲ್ಲಿನ ಲೇಖನದ ಸೊಲ್ಲು:










No comments:
Post a Comment