Thursday, September 14, 2017

Paint Bengaluru with Green and More! (ಬೆ೦ಗಳೂರಿಗೆ ಹಸಿರ ಓಕುಳಿ!)

Please click the link below to join us on Facebook!
ಕೆಳಗಿನ ಕೊ೦ಡಿ ಒತ್ತಿ, ಮುಖಪುಸ್ತಿಕೆಯಲ್ಲಿ ದಯವಿಟ್ಟು ನಮ್ಮನ್ನು ಸೇರಿಕೊಳ್ಳಿ!

Paint Bengaluru with Green and More! (ಬೆ೦ಗಳೂರಿಗೆ ಹಸಿರ ಓಕುಳಿ!)
(Note in both English & Kannada – ಈ ಬರಹ ಕನ್ನಡ ಮತ್ತು ಇ೦ಗ್ಲಿಷ್ ಎರಡಲ್ಲೂ ಇದೆ!)
“Paint Bengaluru with Green and More” is a social media
driven citizen activism in Bengaluru to enhance the green
cover and associated many benefits that come with it.
This activism is easy to participate, it is primarily to
propagate various plants and trees to spread to the
communities, roads, institutions, homes and of course
the terrace gardens.
This is a co-operative agenda with informal communications
and linkages over the social network.
The key thing is to spread awareness, make “FREE” seeds
and saplings available, mentor the newbees to gain
confidence and empower the communities to take charge
of their neighborhood for green and more.
There will be a series of specific propagation based
promotions. A specific promotion will be headed by
an inspiring and self driven “Project Guardian” who
primarily provides cheer-leading and leadership for
the specific promotion to take off. The promotions may be
related to propagating a specific species of plant, targeting
a specific community or public institution like schools,
hospitals and care giving centers etc.

The concerned Project Guardian is committed to organize
people on and around the social network for delivering
results and to promote / grow the movement.

This group serves as an incubator for the promotion,
the promotion may grow big and take off as an
independent entity and leave this forum like a child
leaving lower class school to a higher class school.
The key expression is not only doing things for results,
but also show off the efforts, results and the behind the
scene workings of fun, play, sweat and valor.
It is hoped that individuals, groups, pages, communities,
institutions come together and join hands to make this
co-operative, informal, social network enabled and fun
filled movement a grand success towards eliminating
street garbage culture and restoring garden everywhere
culture.

Sustainability, self help, co-operative and collaborative
mindset and taking charge of local communities for
better governance and upkeep are also the
intended outcomes.
Other city folks across the world repeating this movement
is the prime benchmark for the initial success of this social
venture. Therefore, this forum can be to empower similar
communities elsewhere in the world. Let Bengaluru
enthusiasm and commitment grow to a level for it to be
regarded as the empowering leader of citizen driven green
revolution at the world level.
There will be many other informal and formal takeoffs
from the journey of this venture promoting awareness,
education, mentoring, activism, entrepreneurship,
community engagement and better governance. The
spirit of the forum is primarily to act as a mentor and
incubation lab.
The endorsement of individuals to this movement
will be represented by the membership to this group.
The endorsement of groups, pages, entities etc.
will be highlighted with a list maintained as a
document in the files section.
The specific promotional engagement is maintained
as a document in the file section with full set of
guidelines, associated leadership team and
endorsements for the same. The associated interactions,
efforts and results will be tracked in the comments
section of the document.
This movement aspires to become a cheer-leading
and empowering agent to build better collaborative
bridges with current and new similar engagements
throughout the city and elsewhere too!
There will be no room for politicking, negative propaganda, bickering etc.
Thank you for your faith, self esteem, participation and leadership!
  • Nataraja Upadhya (Founder)
(Document Last Edited on Sept 14, 2017)
“ಬೆ೦ಗಳೂರಿಗೆ ಹಸಿರ ಓಕುಳಿ!” ಇದೊ೦ದು ಸಾಮಾಜಿಕ ಜಾಲತಾಣದಿ೦ದ
ಸಾಧ್ಯವಾದ ನಾಗರಿಕ ಬ೦ಧುಗಳ ನಿರ೦ತರ ಸಹಕಾರಿ ಸಹಯೋಗದ
ಕ್ರಿಯಾಶೀಲ ಪ್ರಯತ್ನ ! ಬೆ೦ಗಳೂರಿನ ಹಸಿರು ಹೊದಿಕೆಯನ್ನು ಹೆಚ್ಸಿಸುವುದೇ
ಇದರ ಪರಮ ಗುರಿ, ಅದರ ಸುತ್ತಲಿನ ಇತರ ಲಾಭಗಳನ್ನೂ
ಗುರಿಯಾಗಿರಿಸಲಾಗುವುದು.
ಈ ಸಹಯೋಗದಲ್ಲಿ ಭಾಗವಹಿಸುವುದು ಸುಲಭ, ಮುಖ್ಯ ಕೆಲಸವೇನೆ೦ದರೆ
ಸಸ್ಯ ಮತ್ತು ಬೀಜಗಳ ಪ್ರಸಾರ, ನೆಡುವಿಕೆ, ಸಾಕುವಿಕೆ ಮತ್ತು ರಕ್ಷಣೆಗಾಗಿ
ತನ್ನದಾದ ಅಳಿಲು ಸೇವೆಯನ್ನು ಮಾಡುವುದು, ಮಾಡಿದ ಕೆಲಸ ಮತ್ತು
ಅದರ ಫಲಿತಾ೦ಶದ ಕುರಿತು ಇತರರಿಗೆ ಸ್ಫೂರ್ತಿ ಬರುವ೦ತೆ
ಸಾಮಾಜಿಕ ಜಾಲತಾಣದಲ್ಲಿ ಹ೦ಚಿಕೊಳ್ಳುವುದು!

ಹಸಿರಿನ ಹೊದಿಕೆಯ ಪ್ರಯತ್ನ ತನ್ನ ಮನೆ ಮೇಲಿನ ತಾರಸಿಯಲ್ಲಿರಬಹುದು,
ಮನೆ ಸುತ್ತಲಿನ ಖಾಲಿ ಜಾಗದಲ್ಲಿರಬಹುದು, ರಸ್ತೆಯಲ್ಲಿರಬಹುದು,
ಹತ್ತಿರದ ಶಾಲೆ, ಆಸ್ಪತ್ರೆ ಮತ್ತಿತರ ಸ೦ಸ್ಥೆಗಳಿಗೆ ಸ೦ಬ೦ಧಿಸಿರಬಹುದು!
ಈ ಸಹಯೋಗದ ಸ೦ಬ೦ಧಿ ಎಲ್ಲಾ ಸ೦ಪರ್ಕ ಮತ್ತು ಮಾಹಿತಿಗಾಗಿ
ಸಾಮಾಜಿಕ ಜಾಲತಾಣವನ್ನೇ ಅವಲ೦ಬಿಸಲಾಗುವುದು. ಮುಖ್ಯ
ಕೆಲಸವೇನೆ೦ದರೆ, ಮಾಹಿತಿ, ಪಾಠ, ತರಬೇತಿ, ಉಚಿತವಾದ ಬೀಜ ಮತ್ತು
ಸಸಿಗಳ ಹ೦ಚುವಿಕೆ, ಜೊತೆಜೊತೆಗೆ, ನಮ್ಮ ನೆರೆಹೊರೆಯಲ್ಲಿ ಸಮುದಾಯದ
ಒಗ್ಗಟ್ಟು, ಆತ್ಮಸ್ಥೈರ್ಯ ಬೆಳೆಸುವುದು, ಹಸಿರು ಮತ್ತು ಅದಕ್ಕೆ ಸ೦ಬ೦ಧಿಸಿದ
ಎಲ್ಲಾ ವಿಷಯಗಳ ಕುರಿತಾಗಿ ಸ್ಥಳೀಯ ಮತ್ತು ಜಾಗತಿಕ ನಾಯಕತ್ವದತ್ತ
ಕೊಡುಗೆಯನ್ನು ಹೆಚ್ಚಿಸುತ್ತಾ ಹೋಗುವುದು!
ಇದಕ್ಕಾಗಿಯೇ ನಿರ್ಮಿತವಾದ ಈ ಸಮೂಹದಲ್ಲಿ, ಪ್ರತಿಯೊ೦ದು
ಅಭಿಯಾನಕ್ಕಾಗಿ ಪ್ರತ್ಯೇಕ ದಸ್ತಾವೇಜನ್ನು ಇಡಲಾಗುವುದು.
ಪ್ರತಿಯೊ೦ದು ಅಭಿಯಾನಕ್ಕೂ ಸ್ವಯ೦ಪ್ರೇರಿತ ಉತ್ಸಾಹಿ ಸ೦ಪರ್ಕಶೀಲ
ಹುರಿದು೦ಬಿ ಹಸಿರು ದೇವತೆಯಾಗಿ ನಾಯಕ ಯಾ ನಾಯಕಿ ಇರುತ್ತಾಳೆ,
ಅವರ ಸುತ್ತ ಸಹಕರಿಸುವ ಒ೦ದಿಷ್ಟು ಹಸಿರು ದೇವತೆಯಿರುತ್ತಾರೆ.
ಆ ಅಭಿಯಾನಕ್ಕೆ ಭುಜಕೊಡುವ ಇತರ ಜಾಲತಾಣ, ಸ೦ಸ್ಥೆ ಮತ್ತು
ವ್ಯಕ್ತಿಗಳ ಜಾಡು ಕೂಡ ಇರುತ್ತದೆ.
ಪ್ರತಿಯೊ೦ದು ಅಭಿಯಾನವು, ಒ೦ದು ಸಸ್ಯ ಪ್ರಬೇಧದ ಪ್ರಸಾರದ
ಕುರಿತಾಗಿ ಇರಬಹುದು, ಇಲ್ಲವೇ ಒ೦ದು ಸ೦ಸ್ಥೆ, ಸಮುದಾಯದ
ಸುತ್ತಲಿನ ಕ್ರಿಯಾಶೀಲತೆ ಕುರಿತಾಗಿ ಇರಬಹುದು. ಈ ಅಭಿಯಾನವು
ಒ೦ದು ರೀತಿಯಲ್ಲಿ ಪ್ರಾಥಮಿಕ ಗರ್ಭಧಾರಣೆಗೆ ಸಹಕರಿಸುವುದು,
ಅಭಿಯಾನ ಬೆಳೆ೦ದ೦ತೆ ಅದು ತನ್ನದೇ ಸ್ವತ೦ತ್ರ ವೇದಿಕೆಯನ್ನು
ನಿರ್ಮಿಸಿಕೊಳ್ಳುವುದು.
ಈ ವೇದಿಕೆಯಲ್ಲಿ ಅಭಿಯಾನದ ಸುತ್ತಲಿನ ಎಲ್ಲಾ ಸ೦ಭ್ರಮವನ್ನು
ಹ೦ಚಿಕೊಳ್ಳಲಾಗುವುದು: ಪ್ರಯತ್ನ, ಫಲಿತಾ೦ಶ, ಲೀಲೆ, ಮಾಹಿತಿ,
ತರಬೇತಿ, ಮತ್ತಿತರ ಎಲ್ಲಾ ರೀತಿಯ ವಿನಿಮಯ ಇರುವುದು. ಇತರರಿಗೆ
ಸ್ಫೂರ್ತಿ ಕೊಡುವತ್ತ ಹಬ್ಬ / ನಾಟಕ/ ಆಟದ ರೀತಿಯಲ್ಲಿ ಮೆರೆಯಲೂ ಅವಕಾಶವಿರುವುದು.
ಈ ಅಭಿಯಾನವು ಇತರ ನಗರ ಮತ್ತು ಪಟ್ಟಣಗಳಿಗೆ ಹಬ್ಬಿದರೆ, ಅದೇ
ಮೊದಲ ಯಶಸ್ಸಿನ ನಿಶಾನೆಯಾಗುವುದು. ಆದ್ದರಿ೦ದ, ಈ ವೇದಿಕೆಯಲ್ಲಿ
ಬೇರೆ ಪ್ರದೇಶದವರೂ ತಮ್ಮ ಅಭಿಯಾನವನ್ನು ಪ್ರಾರ೦ಭಿಸಿಕೊಳ್ಳಬಹುದು,
ಯಾ ಆ ಕುರಿತ ಸಹಯೋಗವನ್ನು ಇಲ್ಲಿಯವರೊ೦ದಿಗೆ ನಡೆಸಬಹುದು.
ಹಾಗಾಗಿ, ಇಡೀ ವಿಶ್ವದ ಹಸಿರು ಅಭಿಯಾನಕ್ಕೆ ಈ ವೇದಿಕೆ ಮಹತ್ತರ
ಕೊಡುಗೆಯಾಗಿ ಹೊಮ್ಮಿಬರಲಿ!
ಈ ಅಭಿಯಾನದ ಒಟ್ಟು ಸ್ವರೂಪಕ್ಕೆ ನಿಮ್ಮ ವೈಯಕ್ತಿಕ ಬೆ೦ಬಲ ಸಾರಲು
ವೇದಿಕೆಗೆ ಸಕ್ರಿಯ ಸದಸ್ಯರಾಗಿ ಬನ್ನಿರಿ. ಜಾಲತಾಣ ಯಾ ಸಾ೦ಸ್ಥಿಕ
ಸಹಕಾರಕ್ಕೆ ಒ೦ದು ಸ೦ದೇಶವನ್ನು ಕೊಟ್ಟು ಸಹಕರಿಸಿ. ಇದೇ ರೀತಿ,
ಪ್ರತಿಯೊ೦ದು ಅಭಿಯಾನದ ಟೊಂಗೆಗಳಿಗೆ “Like” ಒತ್ತಿ ಸಹಕರಿಸಿ,
ಸ೦ದೇಶದ ಮೂಲಕ ನಿಮ್ಮ ಭಾಗವಹಿಸುವಿಕೆಯನ್ನು ಗುರುತಿಸಿಕೊಳ್ಳಿರಿ.
ಯಾವುದೇ ಚಿಲ್ಲರೆ ರಾಜಕೀಯ, ಸಹಯೋಗ ವಿರೋಧಿ ಋಣಾತ್ಮಕ
ಮಾತುಗಳಿಗೆ ಇಲ್ಲಿ ಅವಕಾಶವಿಲ್ಲ!
ನಿಮ್ಮ ನ೦ಬಿಕೆ, ಬೆ೦ಬಲ, ಸಹಕಾರ, ಸಕ್ರಿಯ ಭಾಗವಹಿಸುವಿಕೆ ಮತ್ತು
ನಾಯಕತ್ವಕ್ಕೆ ಅಭಾರಿ
  • ನಟರಾಜ ಉಪಾಧ್ಯ, (ಸ೦ಸ್ಥಾಪಕ)
(ಅ೦ತಿಮ ದಸ್ತಾವೇಜು ಪರಿಷ್ಕರಣ: ೯/೧೪/೨೦೧೭)
Please click the link below to join us on Facebook!
ಕೆಳಗಿನ ಕೊ೦ಡಿ ಒತ್ತಿ, ಮುಖಪುಸ್ತಿಕೆಯಲ್ಲಿ ದಯವಿಟ್ಟು ನಮ್ಮನ್ನು ಸೇರಿಕೊಳ್ಳಿ!