Saturday, July 3, 2021

ನೆನಪಿನ ಪುಟಗಳಿಂದ - ಮಂಟಪ ಪ್ರಭಾಕರ ಉಪಾಧ್ಯ (ನಿವೃತ್ತ ಯಕ್ಷಗಾನ ಕಲಾವಿದನೊಬ್ಬನು ಕಲಾಜೀವನದ ಸುತ್ತಲಿನ ಸವಿನೆನಪುಗಳನ್ನು ಅರಸುತ್ತಾ ಹೋದಾಗ ಪುಟಪುಟಗಳಾಗಿ ಅರಳಿದ ಅಪೂರ್ವ ಸಂಗ್ರಹಾರ್ಹ ಪುಸ್ತಕ!


 

ಕಲಾಜೀವನದ ಹಿಂದಿನ ಕೆಲವೊಂದು ಚಿತ್ರಗಳನ್ನು ಹಂಚಿಕೊಳ್ಳುತ್ತಾ,  ಭಾವ ಭಿತ್ತಿಯೊಡೆದು, ನೆನಪುಗಳು  ಕಟ್ಟೆಯೊಡೆದು, ರಸಧಾರೆಯಾಗಿ ಹರಿಹರಿದು, ಬರಹಗಳು ಬಿರಿಯುತ್ತಾ, ಧನ್ಯತೆಯು ಮುಗಿಲಿಗೇರುತ್ತಾ, ಓದುಗರಿಗೆ ಮುನಮಿಡಿಯುವ ಮಾಂತ್ರಿಕತೆಯ ಮಳೆಯಾಗುತ್ತಾ, ಮಾನವೀಯತೆಯ ಮಲರು  ಮೃದುವಾಗಿ ಮನಕೆ ಮತ್ತಿಟ್ಟು, ಎದೆಗೆ ಮುತ್ತಿಟ್ಟು, ಸ್ಫೂರ್ತಿಯ ಕಾಮನಬಿಲ್ಲು ಕ್ಷಿತಿಜದಲ್ಲಿ ಮೂಡಿಸುತ್ತಾ ಮೇಲೆದ್ದ ನಸುಬೆಚ್ಚಗಿನ ನೇಸರದ ನೆಂಪು. 

       

ಸಾಲುಗಳು: ಸಂಚಿಕೆ, ದಿನಾಂಕ, ವಿಷಯ, ಓದಲು ಫೇಸ್ಬುಕ್‌ ಬರಹದ ಕೊಂಡಿ

2020-10-21

ಕಲಾಜೀವನದ ಪ್ರಾರಂಭ

https://www.facebook.com/photo?fbid=2645575432421188&set=a.1441028246209252


2020-10-22

ಕಲಾಜೀವನದ ಪ್ರಾರಂಭ

https://www.facebook.com/photo?fbid=3508502339262926&set=a.3152151848231312


2020-10-23

ಕಲಾಜೀವನದ ಪ್ರಾರಂಭ

https://www.facebook.com/photo?fbid=3511365578976602&set=a.3152151848231312


2020-10-24

ಕಲಾಜೀವನದ ಪ್ರಾರಂಭ

https://www.facebook.com/photo?fbid=3514387108674449&set=a.3152151848231312


2020-10-25

ಪೆರ್ಡೂರು ಮೇಳದ ಅನುಭವ

https://www.facebook.com/photo?fbid=3517366045043222&set=a.3152151848231312


2020-10-26

ಅಂಬೆಯಾಗಿ

https://www.facebook.com/photo?fbid=3520191594760667&set=a.3152151848231312


2020-10-27

ಇಡಗುಂಜಿ ಮೇಳದ ಅನುಭವ

https://www.facebook.com/photo?fbid=3523291054450721&set=a.3152151848231312


2020-10-28

ಮೂರು ತಾಸಿನ ಮೇಳದ ಅನುಭವ

https://www.facebook.com/photo?fbid=3525755447537615&set=a.532702916842898


2020-10-29

ಮೂರು ತಾಸಿನ ಮೇಳದ ಅನುಭವ

https://www.facebook.com/photo?fbid=3528690693910757&set=a.532702916842898


೧೦

2020-10-30

ಕೃಷ್ಣಯಾಜಿಯವರೊಂದಿಗೆ

https://www.facebook.com/photo?fbid=3531605126952647&set=a.532702916842898


೧೧

2020-10-31

ಹೈದಾರಾಬಾದಿನಲ್ಲಿ ಟಿವಿ ಕಾರ್ಯಕ್ರಮ

https://www.facebook.com/photo?fbid=3534630423316784&set=a.532702916842898


೧೨

2020-11-01

ಶಿರಳಗಿ ಭಾಸ್ಕರ ಜೋಷಿಯವರೊಂದಿಗೆ

https://www.facebook.com/photo?fbid=3538132709633222&set=a.532702916842898


೧೩

2020-11-02

ಬೆಂಗಳೂರಿನಲ್ಲಿ ಕಾಳಿಂಗ ನಾವಡರ ಹಿಮ್ಮೇಳದಲ್ಲಿ ನಾಗಶ್ರೀಯಾಗಿ

https://www.facebook.com/photo?fbid=3540687319377761&set=a.3152151848231312


೧೪

2020-11-03

ಬಚ್ಚಗಾರು ಮೇಳದಲ್ಲಿ ಕೃಷ್ಣನಾಗಿ

https://www.facebook.com/photo?fbid=3543448422434984&set=a.3152151848231312


೧೫

2020-11-04

ನಾನು ಪರವಶನಾದ ಸ್ತ್ರೀ ವೇಷದ ಕಥೆ

https://www.facebook.com/photo?fbid=3546179135495246&set=a.3152151848231312


೧೬

2020-11-05

ಯಕ್ಷದಂಪತಿಗಳು

https://www.facebook.com/photo?fbid=3549045801875246&set=a.532702916842898


೧೭

2020-11-05

ಶಂಭು ಹೆಗಡೆಯವರೊಂದಿಗಿನ 

ನೆನಪು

https://www.facebook.com/photo?fbid=3550986295014530&set=a.532702916842898


17ಅ

2020-11-07

ವಾಸುದೇವ ಸಾಮಗರೊಂದಿಗಿನ ನೆನಪು

https://www.facebook.com/photo?fbid=3555075237938969&set=a.3152151848231312


೧೮

2020-11-08

ಗುಂಡ್ಮಿ ಕರುಣಾಕರರೊಂದಿಗಿನ ನೆನಪು

https://www.facebook.com/photo?fbid=3557566184356541&set=a.532702916842898


೧೯

2020-11-09

ಬೆಂಗಳೂರಿನ ೧೯೯೦ರ ಆಟದಲ್ಲಿ ಸಮಸಪ್ತಕರೊಂದಿಗೆ

https://www.facebook.com/photo?fbid=3560600764053083&set=a.532702916842898


೨೦

2020-11-10

ದಯಾನಂದ ನಾಗೂರು ಅವರೊಂದಿಗಿನ ನೆನಪು

https://www.facebook.com/photo?fbid=3563607360419090&set=a.3152151848231312


೨೧

2020-11-11

೧೯೯೧ರಲ್ಲಿ ಬಚ್ಚಗಾರು ಮೇಳದ ಸಹಕಲಾವಿದರೊಂದಿಗೆ

https://www.facebook.com/photo?fbid=3566560403457119&set=a.3152151848231312


೨೨

2020-11-12

ವಿನಾಯಕ ಕಲ್ಗದ್ದೆ

https://www.facebook.com/photo?fbid=3569185519861274&set=a.3152151848231312


೨೩

2020-11-13

ಹಡಿನಬಾಳ ಶ್ರೀಪಾದ ಹೆಗಡೆ

https://www.facebook.com/photo?fbid=3572077676238725&set=a.532702916842898


೨೪

2020-11-14

ಚಿಟ್ಟಾಣಿ ಸುಬ್ರಹ್ಮಣ್ಯ ಹೆಗಡೆ

https://www.facebook.com/photo?fbid=3575305032582656&set=a.3152151848231312


೨೫

2020-11-15

ಭಾಸ್ಕರ ಗಾಂವ್ಕರ್‌

https://www.facebook.com/photo?fbid=3578012675645225&set=a.3152151848231312


೨೬

2020-11-16

ಕಡತೋಕ ಮಂಜುನಾಥ ಭಾಗವತರ ನೆನಪು

https://www.facebook.com/photo?fbid=3580156048764221&set=a.532702916842898


೨೭

2020-11-17

ಬದುಕಿಗೆ ಕಲೆಯಲ್ಲ

https://www.facebook.com/photo?fbid=3583948271718332&set=a.3152151848231312


೨೮

2020-11-18

ನೆನಪಿನ ನದಿಯಲ್ಲಿ ಕಾಳಿಂಗ

https://www.facebook.com/photo?fbid=3586784084768084&set=a.3152151848231312


೨೯

2020-11-19

ಕರಡಿಕೈ ಅಜ್ಜಯ್ಯ

https://www.facebook.com/photo?fbid=3589693764477116&set=a.3152151848231312

೩೦

2020-11-20

ಗುರಿ ಸೇರಿಸಿದ ದಾರಿ

https://www.facebook.com/photo?fbid=3592565037523322&set=a.532702916842898


೩೧

2020-11-21

ಕಲೆಯ ಬೆಳಕಲ್ಲಿ ಹೊಳೆದ ತಾರೆಗಳು

https://www.facebook.com/photo?fbid=3595069760606183&set=a.3152151848231312


೩೨

2020-11-22

ಕಲೆಯ ಬೆಳಕಲ್ಲಿ ಹೊಳೆದ ತಾರೆಗಳು - ಭಾಗ ೨

https://www.facebook.com/photo?fbid=3598131203633372&set=a.3152151848231312


೩೩

2020-11-24

ಭಾವ ಚಪ್ಪರದಲ್ಲಿ ನಿಜ ಬದುಕನ್ನು ಕಟ್ಟಿದ ಕಲಾವಿದ

https://www.facebook.com/photo?fbid=3602058789907280&set=a.3152151848231312


೩೪

2020-11-25

ಕತ್ತಲೆ ಕಳೆದು ಪ್ರಸಿದ್ಧಿಯ ಬೆಳಕನ್ನು ಕಾಣದ ಕಲಾವಿದ

https://www.facebook.com/photo?fbid=3604982559614903&set=a.3152151848231312


೩೫

2020-11-26

ವಿರಾಮ

https://www.facebook.com/photo?fbid=3608235219289637&set=a.3152151848231312


೩೬

2020-11-27

ಇಡಗುಂಜಿ ಗಣಪತಿ ಯಾಜಿ ಮತ್ತು ಗೋಕರ್ಣ ಹೊನ್ನಪ್ಪ ಗುಣಗ

https://www.facebook.com/photo?fbid=3610832169029942&set=a.3152151848231312


೩೭

2020-11-28

ಸುಕುಮಾರಿಯಾಗಿಯೇ ರಂಗದಲ್ಲಿ ಮೆರೆದ ರಾಮ ನಾಯರಿ

https://www.facebook.com/photo?fbid=3613534548759704&set=a.3152151848231312


೩೮

2020-11-29

ತಡಾಣಿ ಸುಬ್ರಾಯ ಹೆಗಡೆ

https://www.facebook.com/photo?fbid=3616336131812879&set=a.3152151848231312


೩೯

2020-11-30

ರಂಗಸಾರಥಿ ಕಪ್ಪೆಕರೆ ಭಾಗವತರು

https://www.facebook.com/photo?fbid=3619498024830023&set=a.3152151848231312


೪೦

2020-12-01

ಯೋಚನೆಯಲ್ಲಿ ಆಕಾಶವಾದ ಪಾತಾಳದವರು

https://www.facebook.com/photo?fbid=3622310071215485&set=a.3152151848231312


೪೧

2020-12-02

ವೃತ್ತಿ ಕಲಾವಿದನಲ್ಲಿ ಅವಧೂತ ಪ್ರವೃತ್ತಿ

https://www.facebook.com/photo?fbid=3625199034259922&set=a.3152151848231312


೪೨

2020-12-03

ಗುರು ಸ್ನೇಹ

https://www.facebook.com/photo?fbid=3628007683979057&set=a.3152151848231312


೪೩

2020-12-04

ಭಾವದ ಹಡಗು ಹಡಿನಬಾಳ ಶ್ರೀಪಾದ ಹೆಗಡೆ

https://www.facebook.com/photo?fbid=3631149090331583&set=a.3152151848231312


೪೪

2020-12-05

ಬದುಕಿನಾರಂ(ಲಂ)ಬ ತ್ಯಾರ್ಗಲ್‌ ವಿಶ್ವನಾಥ ಭಾಗವತ

https://www.facebook.com/photo?fbid=3633771026736056&set=a.3152151848231312


೪೫

2020-12-06

ದಾನ ಚಿಂತಾಮಣಿ ಶ್ರೀ ಸಿ. ಆರ್.‌ ಬೆಳ್ಳೆಯವರು

https://www.facebook.com/photo?fbid=3637246109721881&set=a.532702916842898


೪೬

2020-12-08

ಯಕ್ಷಗಾನದಿಂದ ವಿದೇಶಯಾನ

https://www.facebook.com/photo?fbid=3642066642573161&set=a.3152151848231312


೪೭

2020-12-09

ನೆನಪಿನ ಪುಟಕ್ಕೆ ಪುಟವಿಟ್ಟ ವರು

https://www.facebook.com/photo?fbid=3644884025624756&set=a.3152151848231312


೪೮

2020-12-09

ಅಭಿಜಾತ ಕಲಾವಿದ ಮಹದೇವ ಪಟಗಾರ

https://www.facebook.com/photo?fbid=3647518135361345&set=a.3152151848231312


೪೯

2020-12-11

ಹಾಸ್ಯರಸ ಕುಂಜರ ಕುಂಜಾಲು

https://www.facebook.com/photo?fbid=3650098498436642&set=a.3152151848231312


೫೦

2020-12-12

ನೇಪಥ್ಯದ ಸ್ನೇಹಿತ

https://www.facebook.com/photo?fbid=3652782681501557&set=a.3152151848231312


೫೧

2020-12-13

ವೃತ್ತಿ ಮೇಳದ ಮೊದಲ ದಿನಗಳು

https://www.facebook.com/photo?fbid=3655470421232783&set=a.3152151848231312


೫೨

2020-12-14

ನಿತ್ಯದ ನೆನಪು

https://www.facebook.com/photo?fbid=3657997654313393&set=a.3152151848231312


೫೩

2020-12-15

ಮರೆಯಲಾಗದ ಮಹಾನುಭಾವ - ಕೆರೆಮನೆ ನರಸಿಂಹ ಹೆಗಡೆ

https://www.facebook.com/photo?fbid=3660677584045400&set=a.3152151848231312


೫೪

2020-12-16 ಇಂದಿಗೂ ನನ್ನ ಕನಸಿನ ಗಂಧರ್ವ

https://www.facebook.com/photo?fbid=3663308617115630&set=a.3152151848231312


೫೫

2020-12-17

ಯಕ್ಷಮೋಹನ ಕೆ. ಮೋಹನ ಹೊಳ್ಳ

https://www.facebook.com/photo?fbid=3665919396854552&set=a.3152151848231312


೫೬

2020-12-18

ನೃತ್ಯಗುರು ಬಿ. ಆರ್‌. ಮಂಜುಳಾ

https://www.facebook.com/photo?fbid=3668244543288704&set=a.3152151848231312


೫೭

2020-12-19

ಅಹಂಕಾರವೆಂಬ ಅಜೀರ್ಣಕ್ಕೆ ಶುಂಠಿ ಕಷಾಯ

https://www.facebook.com/photo?fbid=3670742046372287&set=a.3152151848231312


೫೮

2020-12-20

ಭಾವಕೋಶವನ್ನು ತುಂಬಿಸಿದ ಮೇಳದ ಯಜಮಾನ

https://www.facebook.com/photo?fbid=3673316539448171&set=a.3152151848231312


೫೯

2020-12-21

ಯಕ್ಷರಂಗದ ಮೋಹಿನಿ - ಕೋಟ ವೈಕುಂಠ

https://www.facebook.com/photo?fbid=3675952175851274&set=a.3152151848231312


೬೦

2020-12-22

ನವರಸವನ್ನು ತೋರುವ ಕಲಾವಿದನಿಗೆ, ಷಡ್ರಸವನ್ನು ತೋರುವ ಹಸಿವೆ

https://www.facebook.com/photo?fbid=3678782875568204&set=a.3152151848231312


೬೧

2020-12-23

ಧ್ವನಿವರ್ಧಕವೆಂಬ ಮಾಯೆ - ಮೈಕಿನವನು

https://www.facebook.com/photo?fbid=3680748272038331&set=a.3152151848231312


೬೨

2020-12-24

ಮೇಳವೆಂಬ ವ್ಯವಸ್ಥೆಯನ್ನು ಕಟ್ಟಿ ನಿಲ್ಲಿಸುವ ಯಜಮಾನ

https://www.facebook.com/photo?fbid=3683187221794436&set=a.3152151848231312


೬೩

2020-12-25

ಕಲೆಯನ್ನು ತಲೆಯ ಮೇಲೆ ಹೊತ್ತು ಕುಣಿಸಿದವರು - ಟೆಂಟಿನಾಳುಗಳು

https://www.facebook.com/photo?fbid=3685666971546461&set=a.3152151848231312


೬೪

2020-12-26

ಚೌಕಿಯ ಶುದ್ಧಾಂತರಂಗ

https://www.facebook.com/photo?fbid=3687917631321395&set=a.3152151848231312


೬೫

2020-12-27

ಕಲಾ ವ್ಯಾಪಾರ

https://www.facebook.com/photo?

fbid=3690369364409555&set=a.3152151848231312


೬೬

2020-12-28

ಪ್ರದರ್ಶನಕ್ಕೆ ಶೃತಿಯಾದವರು - ಜಂಬೂರು ರಾಮಚಂದ್ರ ಶಾನುಭಾಗ್‌

https://www.facebook.com/photo?fbid=3692584007521424&set=a.3152151848231312


೬೭

2020-12-29

ಕಾಡ ಕುಸುಮಗಳು

https://www.facebook.com/photo?fbid=3694894433957048&set=a.3152151848231312


೬೮

2020-12-30

ಕಲಾನಂದದ ಕೆರೆಮನೆಯಲ್ಲೀಜಿದ ಮಹಾಲ

https://www.facebook.com/photo?fbid=3697153780397780&set=a.3152151848231312


೬೯

2020-12-31

ನಗು ಚಂದ್ರನನ್ನು ಮುಖದಲ್ಲಿ ಹೊತ್ತ ಬಿ. ಚಂದ್ರಶೇಖರ ಅಡಿಗರು

https://www.facebook.com/photo?fbid=3699558586823966&set=a.3152151848231312


೭೦

2021-01-01

ರಂಗ ತ್ರಿವಿಕ್ರಮ - ಸಿದ್ಧಾಪುರ ಅಶೋಕ ಭಟ್ಟರು

https://www.facebook.com/photo?fbid=3702137846566040&set=a.3152151848231312


೭೧

2021-01-02

ಅವಿರತ ರಂಗಾಸಕ್ತ - ಚಿಟ್ಟಾಣಿ ರಾಮಚಂದ್ರ ಹೆಗಡೆ

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F3704741516305673


೭೨

2021-01-03

ರಂಗಹಂದರ ಪಟೇಲರ ಮನೆ ಕೋಟ ಶ್ರೀಧರ ಹಂದೆಯವರು

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F3707053829407775


೭೩

2021-01-04

ಐದು ರೂಪಾಯಿಯ ಮೌಲ್ಯ ಎಷ್ಟು?

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F3709947112451780


೭೪

2021-01-08

ಭಾವಗಾನಯಾನ - ಶ್ರೀ ನೆಬ್ಬೂರು ನಾರಾಯಣ ಭಾಗವತರು

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F3720142728098885


೭೫

2021-01-14

ಕಲಾದೇಗುಲ ಧರ್ಮದರ್ಶಿ  - ಶ್ರೀ ಟಿ. ಶ್ಯಾಮ ಭಟ್ಟರು

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F3735892236523934


೭೬

2021-01-20

ಕಲಾಚಂದ್ರಚೂಡ ಕೆರೆಮನೆ ಶಂಭು ಹೆಗಡೆಯವರು

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F3752099744903183


೭೭

2021-01-21

ಕಲಾಚಂದ್ರಚೂಡ ಕೆರೆಮನೆ ಶಂಭು ಹೆಗಡೆಯವರು - ಭಾಗ ೨

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F3754614041318420


೭೮

2021-01-31

ಕಲಾಚಂದ್ರಚೂಡ ಕೆರೆಮನೆ ಶಂಭು ಹೆಗಡೆಯವರು - ಭಾಗ ೩

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F3780929952020162


೭೯

2021-02-05

ಕಲಾಚಂದ್ರಚೂಡ ಕೆರೆಮನೆ ಶಂಭು ಹೆಗಡೆಯವರು - ಭಾಗ ೪

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F3793606624085828


೮೦

2021-02-10

ಕಲಾಚಂದ್ರಚೂಡ ಕೆರೆಮನೆ ಶಂಭು ಹೆಗಡೆಯವರು - ಭಾಗ ೫

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F3807263759386781


೮೧

2021-05-13

ಬದುಕನ್ನು ಮಂಟಪದಲ್ಲಿ ಇಟ್ಟವರು - ನಮ್ಮ ಅಜ್ಜಯ್ಯ ಮಂಟಪ ರಾಮ ಉಪಾಧ್ಯರು

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4074233082689846


೮೨

2021-05-13

ಬದುಕನ್ನು ಮಂಟಪದಲ್ಲಿ ಇಟ್ಟವರು - ನಮ್ಮ ಅಜ್ಜಯ್ಯ ಮಂಟಪ ರಾಮ ಉಪಾಧ್ಯರು - ಭಾಗ ೨

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4074235652689589


೮೩

2021-05-14

ಬದುಕನ್ನು ಮಂಟಪದಲ್ಲಿ ಇಟ್ಟವರು - ನಮ್ಮ ಅಜ್ಜಯ್ಯ ಮಂಟಪ ರಾಮ ಉಪಾಧ್ಯರು - ಭಾಗ ೩

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4077396759040145


೮೪

2021-05-19

ನಡೆನುಡಿಯಲ್ಲಿ ಬೆಳದಿಂಗಳನ್ನು ಚೆಲ್ಲಿದವರು - ನಮ್ಮ ಅಪ್ಪಯ್ಯ ಚಂದ್ರಶೇಖರ ಉಪಾಧ್ಯ

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4093222677457553


೮೫

2021-05-20

ನಡೆನುಡಿಯಲ್ಲಿ ಬೆಳದಿಂಗಳನ್ನು ಚೆಲ್ಲಿದವರು - ನಮ್ಮ ಅಪ್ಪಯ್ಯ ಚಂದ್ರಶೇಖರ ಉಪಾಧ್ಯ - ಭಾಗ ೨

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4096136293832858


೮೬

2021-05-21

ನಡೆನುಡಿಯಲ್ಲಿ ಬೆಳದಿಂಗಳನ್ನು ಚೆಲ್ಲಿದವರು - ನಮ್ಮ ಅಪ್ಪಯ್ಯ ಚಂದ್ರಶೇಖರ ಉಪಾಧ್ಯ - ಭಾಗ ೩

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4098973060215848


೮೭

2021-05-22

ನಡೆನುಡಿಯಲ್ಲಿ ಬೆಳದಿಂಗಳನ್ನು ಚೆಲ್ಲಿದವರು - ನಮ್ಮ ಅಪ್ಪಯ್ಯ ಚಂದ್ರಶೇಖರ ಉಪಾಧ್ಯ - ಭಾಗ ೪

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4102004343246053


೮೮

2021-05-23

ನಡೆನುಡಿಯಲ್ಲಿ ಬೆಳದಿಂಗಳನ್ನು ಚೆಲ್ಲಿದವರು - ನಮ್ಮ ಅಪ್ಪಯ್ಯ ಚಂದ್ರಶೇಖರ ಉಪಾಧ್ಯ - ಭಾಗ ೫

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4105029162943571


೮೯

2021-05-26

ಕಲೆಯನ್ನು ಕೆಲಸದಲ್ಲಿ ತೋರಿದವಳು - ನಮ್ಮಮ್ಮ ಜಾನಕಿ

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4114027065377114


೯೦

2021-05-27

ಕಲೆಯನ್ನು ಕೆಲಸದಲ್ಲಿ ತೋರಿದವಳು - ನಮ್ಮಮ್ಮ ಜಾನಕಿ - ಭಾಗ ೨

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4117855264994294


೯೧

2021-05-28

ಕಲೆಯನ್ನು ಕೆಲಸದಲ್ಲಿ ತೋರಿದವಳು - ನಮ್ಮಮ್ಮ ಜಾನಕಿ - ಭಾಗ ೩

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4120926014687219


೯೨

2021-05-31

ಮನೆಯ ಹೆಸರನ್ನು ವ್ಯಾಪಾರದಲ್ಲಿ ಬೆಳೆಸಿದವರು - ಶ್ರೀ ಮಂಟಪ ಗೋಪಾಲ ಉಪಾಧ್ಯರು

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4130023940444093


೯೩

2021-06-01

ಮನೆಯ ಹೆಸರನ್ನು ವ್ಯಾಪಾರದಲ್ಲಿ ಬೆಳೆಸಿದವರು - ಚಿಕ್ಕಮ್ಮ ಯಶೋದಮ್ಮ

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4133059636807190




೯೪

2021-06-02

ಕಾಲ ಯಾನ

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4135966999849787


೯೫

2021-06-03

ಕಾಲ ಯಾನ - ಭಾಗ ೨

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4138662929580194


೯೬

2021-06-04 ಕಾಲ ಯಾನ - ಭಾಗ ೩

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4141674732612347


೯೭

2021-06-05

ಕಾಲ ಯಾನ - ಭಾಗ ೪

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4144465182333302


೯೮

2021-06-06

ಕಾಲ ಯಾನ - ಭಾಗ ೫

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4147305665382587


೯೯

2021-06-07

ಕಾಲ ಯಾನ - ಭಾಗ ೬

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4150091111770709


೧೦೦

2021-06-08

ಕಾಲ ಯಾನ - ಭಾಗ ೭

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4153092838137203


೧೦೧

2021-06-09

ಕಾಲ ಯಾನ - ಭಾಗ ೮

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4155873614525792


೧೦೨

2021-06-10

ಕಾಲ ಯಾನ - ಭಾಗ ೯

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4158692067577280


೧೦೩

2021-06-11

ಕಾಲ ಯಾನ - ಭಾಗ ೧೦

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4161411970638623


೧೦೪

2021-06-12

ಕಾಲ ಯಾನ - ಭಾಗ ೧೧

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4164293300350490


೧೦೫

2021-06-13

ಕಾಲ ಯಾನ - ಭಾಗ ೧೨

https://www.facebook.com/100003095841279/videos/4167030596743427/


೧೦೬

2021-06-16

ನೇಪಥ್ಯದ ಕಲಾವಿದ - ಶ್ರೀ ರಾಜಶೇಖರ ಹಂದೆಯವರು

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4174812855965201


೧೦೭

2021-06-17

ನೇಪಥ್ಯದ ಕಲಾವಿದ - ಶ್ರೀ ರಾಜಶೇಖರ ಹಂದೆಯವರು - ಭಾಗ ೨

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4177316475714839


೧೦೮

2021-06-18

ನೇಪಥ್ಯದ ಕಲಾವಿದ - ಶ್ರೀ ರಾಜಶೇಖರ ಹಂದೆಯವರು - ಭಾಗ ೩

https://www.facebook.com/100003095841279/videos/4179918635454623/


೧೦೯

2021-06-20

ನೇಪಥ್ಯದ ಕಲಾವಿದ - ಶ್ರೀ ರಾಜಶೇಖರ ಹಂದೆಯವರು - ಭಾಗ ೪

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4185302014916285


೧೧೦

2021-06-22

ವೇಣು ವಿಶಾರದ - ಶ್ರೀ ಎಚ್.‌ ಎಸ್.‌ ವೇಣುಗೋಪಾಲರು

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4190439887735831


೧೧೧

2021-06-23

ಸಂಗೀತ ಸಹಕಾರಿಗಳು

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4193203097459510


೧೧೨

2021-06-26

ಚಂಡೆಯೇ ಮನಸ್ಸಿನ ನಾಲಗೆಯಾದವರು - ಇಡಗುಂಜಿ ಶ್ರೀ ಕೃಷ್ಣಯಾಜಿಯವರು

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4201610839952069


೧೧೩

2021-06-27

ಚಂಡೆಯೇ ಮನಸ್ಸಿನ ನಾಲಗೆಯಾದವರು - ಇಡಗುಂಜಿ ಶ್ರೀ ಕೃಷ್ಣಯಾಜಿಯವರು - ಭಾಗ ೨

https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4204287596351060


೧೧೪

2021-07-02

ಯಕ್ಷರಂಗದ ಸಾಕ್ಷಿಪ್ರಜ್ಞೆ - ಶ್ರೀ ಅನಂತ ಪದ್ಮನಾಭ ಫಾಟಕರು https://www.facebook.com/plugins/post.php?href=https%3A%2F%2Fwww.facebook.com%2Fekavyakthi.yakshagana%2Fposts%2F4219757218137431


೧೧೫

2021-07-03

ಯಕ್ಷರಂಗದ ಸಾಕ್ಷಿಪ್ರಜ್ಞೆ - ಶ್ರೀ ಅನಂತ ಪದ್ಮನಾಭ ಫಾಟಕರು - ಭಾಗ ೨

https://www.facebook.com/100003095841279/videos/319328643186243/


೧೧೬

2021-07-04

ಯಕ್ಷರಂಗದ ಸಾಕ್ಷಿಪ್ರಜ್ಞೆ - ಶ್ರೀ ಅನಂತ ಪದ್ಮನಾಭ ಫಾಟಕರು - ಭಾಗ ೩

https://www.facebook.com/plugins/post.php?href=https%3A%2F%2Fwww.facebook.com%2Fmantapupadhya%2Fposts%2F2839874922991237


೧೧೭

2021-07-05

ಯಕ್ಷರಂಗದ ಸಾಕ್ಷಿಪ್ರಜ್ಞೆ - ಶ್ರೀ ಅನಂತ ಪದ್ಮನಾಭ ಫಾಟಕರು - ಭಾಗ ೪

https://www.facebook.com/plugins/post.php?href=https%3A%2F%2Fwww.facebook.com%2Fmantapupadhya%2Fposts%2F2840570366255026


೧೧೮

2021-07-06

ಯಕ್ಷರಂಗದ ಸಾಕ್ಷಿಪ್ರಜ್ಞೆ - ಶ್ರೀ ಅನಂತ ಪದ್ಮನಾಭ ಫಾಟಕರು - ಭಾಗ ೫

https://www.facebook.com/plugins/post.php?href=https%3A%2F%2Fwww.facebook.com%2Fmantapupadhya%2Fposts%2F2841422472836482


೧೧೯

17-07-2021

ಗಾನ ಗಣಪತಿ: ವಿದ್ವಾನ್ ಗಣಪತಿ ಭಟ್ಟರು (ಮುನ್ಸೂಚನೆ)

https://www.facebook.com/plugins/post.php?href=https%3A%2F%2Fwww.facebook.com%2Fmantapupadhya%2Fposts%2F2848929798752416


೧೨೦

2021-07-18

ಗಾನ ಗಣಪತಿ: ವಿದ್ವಾನ್ ಗಣಪತಿ ಭಟ್ಟರು (ಭಾಗ ೧)

https://www.facebook.com/plugins/post.php?href=https%3A%2F%2Fwww.facebook.com%2Fmantapupadhya%2Fposts%2F2849616692017060


೧೨೧

2021-07-19

ಗಾನ ಗಣಪತಿ: ವಿದ್ವಾನ್ ಗಣಪತಿ ಭಟ್ಟರು (ಭಾಗ ೨)

https://www.facebook.com/plugins/post.php?href=https%3A%2F%2Fwww.facebook.com%2Fmantapupadhya%2Fposts%2F2850317475280315


೧೨೨

2021-07-20

ಗಾನ ಗಣಪತಿ: ವಿದ್ವಾನ್ ಗಣಪತಿ ಭಟ್ಟರು (ಭಾಗ ೩)

https://www.facebook.com/plugins/post.php?href=https%3A%2F%2Fwww.facebook.com%2Fmantapupadhya%2Fposts%2F2850989868546409


೧೨೩

2021-07-21

ಗಾನ ಗಣಪತಿ: ವಿದ್ವಾನ್ ಗಣಪತಿ ಭಟ್ಟರು (ಭಾಗ ೪)

https://www.facebook.com/plugins/post.php?href=https%3A%2F%2Fwww.facebook.com%2Fmantapupadhya%2Fposts%2F2851695351809194


೧೨೪

2021-07-22

ಗಾನ ಗಣಪತಿ: ವಿದ್ವಾನ್ ಗಣಪತಿ ಭಟ್ಟರು (ಭಾಗ ೫)

https://www.facebook.com/plugins/post.php?href=https%3A%2F%2Fwww.facebook.com%2Fmantapupadhya%2Fposts%2F2852400751738654


೧೨೫

2021-08-08

ಯಗಳ ಯಕ್ಷಗಾನ

ಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆ - ಭಾಗ ೧

https://www.facebook.com/mantapaupadhya/videos/377575040598964


೧೨೬

2021-08-09

ಯಗಳ ಯಕ್ಷಗಾನ

ಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆ - ಭಾಗ ೨

https://www.facebook.com/plugins/post.php?href=https%3A%2F%2Fwww.facebook.com%2Fmantapaupadhya%2Fposts%2F2381540451979788


೧೨೭

2021-08-10

ಯಗಳ ಯಕ್ಷಗಾನ

ಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆ - ಭಾಗ ೩

https://www.facebook.com/plugins/post.php?href=https%3A%2F%2Fwww.facebook.com%2Fmantapaupadhya%2Fposts%2F2382335381900295


September 15, 2021
ನೆನಪಿನ ಪುಟಗಳಿಂದ-128
ಕಲಾಸಾಗರದ ಭರತಸುಂದರಿ.
ಶ್ರೀಮತಿ ಸುಂದರಿ ಸಂತಾನಂ ಅವರು.



September 28, 2021

ನೆನಪಿನ ಪುಟಗಳಿಂದ-129
ಯಕ್ಷಗಾನಕ್ಕೆ ಸಂದ ಕನಕಪುಷ್ಪ.


September 29, 2021

ನೆನಪಿನ ಪುಟಗಳಿಂದ-130
ಯಕ್ಷಗಾನಕ್ಕೆ ಸಂದ ಕನಕಪುಷ್ಪ.

Dec 17, 2022
ನೆನಪಿನ ಪುಟಗಳಿಂದ-131 "ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ" ದಾವಣಗೆರೆ ಶ್ರೀಕಾಂತ ಭಟ್ಟರು.

Dec 17, 2022

ನೆನಪಿನ ಪುಟಗಳಿಂದ-132

"ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ" ದಾವಣಗೆರೆ ಶ್ರೀಕಾಂತ ಭಟ್ಟರು. - ಭಾಗ ೨

https://www.facebook.com/share/p/17HTk3a496/

ನೆನಪಿನ ಪುಟಗಳಿಂದ-133

ಕಲಾಕರಣದ ರಾಜಕಾರಣಿ.

 ಯಲ್ಲಾಪುರದ ಶ್ರೀ ಪ್ರಮೋದ ಹೆಗಡೆಯವರು.

https://www.facebook.com/share/p/1GRP5oKR4v/

ನೆನಪಿನ ಪುಟಗಳಿಂದ-134

ಶಿಕ್ಷಣ ರಂಗದ ಮಹಾನಟ

    ಶ್ರೀ ಮೋಹನ ಆಳ್ವರು.

https://www.facebook.com/share/p/1Csyd8uYvq/

ನೆನಪಿನ ಪುಟಗಳಿಂದ-135

*ಕಲೆಯಲ್ಲರಳಿದ ಚೈತನ್ಯ* -  ಶ್ರೀಧರ ಷಡಕ್ಷರಿ

https://www.facebook.com/share/p/16vWsiuXJr/

ನೆನಪಿನ ಪುಟಗಳಿಂದ-136

*ರಸಜೀವನ ಜಯರಾಮ*

ಶ್ರೀ ಕಬ್ಯಾಡಿ ಜಯರಾಮ ಆಚಾರ್ಯರು 

https://www.facebook.com/share/p/175YeXvMV4/

ನೆನಪಿನ ಪುಟಗಳಿಂದ-137

“ಅಲೌಕಿಕ ವೀಣೆ”  

ವೀಣಾ ಬನ್ನಂಜೆ 

https://www.facebook.com/share/p/1C5n3tE54F/

ನೆನಪಿನ ಪುಟಗಳಿಂದ-138

“ಅಲೌಕಿಕ ವೀಣೆ”  

ವೀಣಾ ಬನ್ನಂಜೆ - ಭಾಗ ೨

ನೆನಪಿನ ಪುಟಗಳಿಂದ -139

*ಸಂಸ್ಕೃತಿಯ ಗಡಿ ಗಡಿಕೈ ಮನೆ*

https://www.facebook.com/share/p/1Ekr6bdYij/

ನೆನಪಿನ ಪುಟಗಳಿಂದ -140

*ಸಂಸ್ಕೃತಿಯ ಗಡಿ ಗಡಿಕೈ ಮನೆ* - ಭಾಗ ೨

https://www.facebook.com/share/p/1CsDsGJ5vV/

ನೆನಪಿನ ಪುಟಗಳಿಂದ -141

ಋಣಗಣನೆ. - ದೇವರಾಜ

https://www.facebook.com/share/v/1FKDpHj4qh/

(ಇನ್ನೂ ಇದೆ, ನಿರೀಕ್ಷಿಸಿರಿ)

...

ಮತ್ತಿತರ:

ಮೇ ೧೦, ೨೦೨೪

ನವ ಭಾಮಿನಿಯಾಗಿ ಶ್ರೀನಿವಾಸನ್

https://www.facebook.com/share/v/1FypxMLfoL/

ಬದುಕುವ ದಾರಿಯಲ್ಲಿ ಗುರಿಗೊಂದು ಗರಿ

 - ಡಾ. ರತ್ನಾಕರ ಉಪಾಧ್ಯ

ಭಾಗ ೧:

https://www.facebook.com/share/p/1BEWbYqtrj/

ಭಾಗ ೨:

https://www.facebook.com/share/p/1CiVSR4Bhf/

ಭಾಗ ೩:

https://www.facebook.com/share/p/1BVoJ6BP1e/

ಭಾಗ ೪:

https://www.facebook.com/share/p/1FY9RdSX2M/

ಭಾಗ ೫:

https://www.facebook.com/share/p/17gmXobzsV/

ಭಾಗ ೬:

https://www.facebook.com/share/p/1CN7oiMKFj/

ಭಾಗ ೭:

https://www.facebook.com/share/p/14PJuGGPH88/

ಭಾಗ ೮:

https://www.facebook.com/share/p/1LzbAZpVUr/

ಭಾಗ ೯:

https://www.facebook.com/share/p/1B2oQFeo8c/

ಭಾಗ ೧೦:

https://www.facebook.com/share/p/16sMkLki6p/

ಭಾಗ ೧೧:

https://www.facebook.com/share/p/1B55sh2zpq/

ಭಾಗ ೧೨: ಅಂತಿಮ

https://www.facebook.com/share/p/19goUpQxo8/

Tasting The Famous Mango Falooda & Golden Gudbud @Mantap Ice Cream In Seshadripuram |

 Mr.Chiranthan santosh Gowda

https://www.youtube.com/watch?v=urUCRbs-fA8

...

*ರಂಗಮಂಟಪದಿಂದ ಸ್ನೇಹ ಮಂಟಪದವರೆಗೆ* - ದಯಾನಂದ ನಾಗೂರು

https://www.facebook.com/share/p/1AcF3W9FSA/

ನಮ್ಮೆಲರ ಕಲಾದಾರಿ ಬೇರೆ ಬೇರೆ 

ಕಲಾನುಭವಕ್ಕೆ ಅನುಭವವೇ ದಾರಿ

Chandabhama - Yakshagana & Kathak Duet

https://www.youtube.com/watch?v=m3Kv0pTstOE

Amazing Ice Cream Combinations At Old Bengaluru’s Family Run MANTAP ICE CREAM Sheshadripuram - Kripal Ammanna

https://www.youtube.com/watch?v=si4LW53nCBw

Must Try Delicious Icecreams & Milkshakes - Mantap Icecream Since 1965 - Dinesh Perspective

https://www.youtube.com/watch?v=sFsbYFOdXic


ಮುಗಿಯದ ಕಥೆಯಿದು, ಮುಂದಿನ ಅಧ್ಯಾಯಗಳಿಗೆ ಪದೇ ಪದೇ ಭೇಟಿ ನೀಡಿ. 

Saturday, May 30, 2020

ನಮ್ಮ ಕಾಡಿನ ಮೂಲೆಯಲ್ಲಿ ಕಾವ್ಯ ಬರೆಸುತ್ತಿರುವ ಕತ್ತರಿ ದಾಸವಾಳ!



ಮನೆಯ ಮೇಲೆ ಕಾಡು ಮಾಡಿದಾಗ, ಈ ಕಾಡು ಬರೇ ಹಸಿರಿಗೇ ಮಾತ್ರ ಇರಬೇಕಾಗಿಲ್ಲ. ಕಾಡಿನ ಒಂದೊಂದು ಮೂಲೆಯಲ್ಲೂ ಕಾವ್ಯವನ್ನು ಅರಳಿಸಲು ಸಾಧ್ಯವಿದೆ. 

ಕಾಡಿನ ಒಂದು ವಿಶೇಷವೆಂದರೆ ದಟ್ಟವಾಗಿ ಇರುವ ಗಿಡ, ಮರ, ಬಳ್ಳಿಗಳು. ಒಂದು ಗಿಡ ಬಾಡಿದರೆ ಇನ್ನೊಂದು ಅದನ್ನು ತುಂಬಿಸುತ್ತದೆ. ಹಾಗಾಗಿ ಕಾಡಿನಲ್ಲಿ ಆಗಾಗ ಮುನ್ನವೇ ತುಂಬಿಸುತ್ತಾ ಹೋಗುವುದು ಬುದ್ದಿವಂತಿಕೆ. ಆಗಾಗ ಹೆಗ್ಗಣರಾಯ ಬಂದು ಬೇರನ್ನೇ ಕತ್ತರಿಸಿದಾಗ ಅಮೂಲ್ಯವಾದ ಒಂದು ಗಿಡವೋ ಮರವೋ ಕೈ ತಪ್ಪುತ್ತದೆ. ಹಾಗಾಗಿ, ಆಕಸ್ಮಿಕಗಳಿಗೆ ಅಳುವ ಮುನ್ನವೇ ಅವನ್ನು ಮೀರಿ ಹೊಸತನ್ನು ನೆಡುತ್ತಲೇ ಹೋಗಬೇಕು. ಪ್ರತಿ ಆಕಸ್ಮಕದ ನಂತರ ಅದೇ ಸ್ಥಾನದಲ್ಲಿ ಇನ್ನೊಂದು ಅರಳಲು ಸಿದ್ಧವಾಗಬೇಕು.

ಕಳೆದ ಮೂರು ತಿಂಗಳಲ್ಲಿ ಕರೋನಾ ಮಹಿಮೆಯಿಂದಾಗಿ ಈ ರೀತಿಯ ಹೊಸತನ್ನು ನೆಡುವುದು ಸಾಧ್ಯವಾಗಿಲ್ಲ. ಆದರೂ ಇರುವ ಗಿಡಗಳನ್ನೇ ಮರಿಗಳನ್ನಾಗಿ ಮಾಡಿ ನೆಡುತ್ತಾ ಹೋಗಿದ್ದೇನೆ. ಈ ರೀತಿಯಾಗಿ, ವೈವಿಧ್ಯಗಳಿಗೆ ತಾತ್ಕಾಲಿಕ ಹಿನ್ನಡೆಯಾದರೂ ಹಸಿರಿನ ಹೆಚ್ಚಳಕ್ಕೆ ತೊಂದರೆ ಇಲ್ಲ.

ಗಿಡಗಳನ್ನು ನೆಡುವಾಗ ನೆನಪಿಡಲ್ಲಿರಬೇಕಾದ ಅಂಶ, ನೆಡುವಿಕೆಗೂ ಫಲಿತಾಂಶಕ್ಕೂ ಇರುವ ಸಮಯದ ವ್ಯತ್ಯಯ ಬೇರೆ ಬೇರೆ ಗಿಡಮರಗಳಿಗೆ ಬೇರೆಬೇರೆಯಾಗಿರುತ್ತದೆ. ಮೂರು ತಿಂಗಳಿಂದ ಹಿಡಿದು ಏಳು ವರ್ಷಗಳ ತನಕ ಕಾಯುವ ಪ್ರಮೇಯ ಇರುತ್ತದೆ. ಹಾಗಾಗಿಯೇ, ಈ ಕರೋನಾ ಸಮಯದಲ್ಲೂ ಬಹಳ ಹಿಂದೆ ನೆಟ್ಟ ಗಿಡಗಳು ಅರಳಿ ಹೂವಾಗಿ ಹಾಯಾದವು.

ಪಾರಂಪಳ್ಳಿ ಪಡುಕೆರೆಯಲ್ಲಿ ಕೃಷಿಕ ಕುಟುಂಬದಲ್ಲಿದ್ದ ಕಾರಣ, ಗಿಡಮರಗಳ ಹಿಂದೆ ಉಪಯೋಗದ ಮಾಪನವೇ ಮುಖ್ಯ. ದೇವರಿಗೆ, ಮುಡಿಯಲು, ತಿನ್ನಲು ಹೀಗೆ ಈ ಆದಾರಗಳಲ್ಲಿ ಗಿಡಮರಗಳಿದ್ದವು. ಇದನ್ನು ಮೀರಿ ವೈವಿಧ್ಯಗಳಿಗೆ ನಾವು ತೋಡುಗಳ ಅಕ್ಕ ಪಕ್ಕ ಹುಡುಕಬೇಕಾಗಿತ್ತು.

ಕತ್ತರಿ ದಾಸವಾಳ ನಮ್ಮ ಮನೆಯಲ್ಲಿ ಹುಲುಸಾಗಿ ಬೆಳೆದು ಮರವಾಗಿ ೫೦ರ ತನಕದ ಹೂವುಗಳನ್ನು ಒಂದೇ ಮರವು ಕೊಡಬಲ್ಲದ್ದಾಗಿದ್ದು ದೇವರ ಪೂಜೆಗೆ ಅದೊಂದೇ ಸಾಕಾಗುತ್ತಿತ್ತು. ಅಪ್ಪ ಆ ನಂತರ ಮಾಡುವ ಪೂಜೆಗೆ ಹೂ ಕೊಯ್ಯುವ ಕೈಂಕರ್ಯ ನಮ್ಮದಿತ್ತು. ಆದರೆ ಅಮ್ಮ, ತನ್ನ ಪೂಜೆಗೆ ತಾನೇ ಹೂವು ಕೊಯ್ಯತ್ತಿದ್ದಳು. ಸ್ನಾನ ಮಾಡಿ ಮಿಂದ ಥಂಡಿ ಬಟ್ಟೆಯಲ್ಲೇ ಹೂವು ಕೊಯ್ದು ದೇವರಿಗಿಟ್ಟು ತುಳಸಿಗಿಟ್ಟು ಕೈಮಗಿದ ನಂತರವೇ ನಮ್ಮ ಹೂವು ಕೊಯ್ಯುವ ಸಮಯವಿರುತ್ತಿತ್ತು. ಅಮ್ಮ ತನಗೆ ಬೇಕಾದಷ್ಟೇ ಕೊಯ್ದು ಹೋದ ಕಾರಣ ನಮಗೆ ಕೊಯ್ಯಲು ಸಾಕಷ್ಟು ಹೂವುಗಳು ಇರುತ್ತಿದ್ದವು, ಮತ್ತೆ ಉಳಿಯುತ್ತಿದ್ದವು. ಹಾಗಾಗಿ, ಈ ಕತ್ತರಿ ದಾಸವಾಳದ ಕೆಳ ತುದಿಯನ್ನು ಹೀರಿ, ಸಿಹಿ ಮಕರಂದವನ್ನು ಕುಡಿದು, ಹೂವನ್ನು ಬಿಸುಟು ನಮ್ಮ ಹೊಟ್ಟೆ ಪೂಜೆಯು ದೇವರ ಪೂಜೆಗಿಂತ ಮೊದಲೇ ಸಾಗುತ್ತಿತ್ತು. ಬೇಕಷ್ಟು ಹೂವುಗಳು ಇರುವ ಕಾರಣ ಕೆಂಪು ಮೆಣಸಿಕಾಯಿಯ ಹಾಗೆ ಕಾಣುವ ಮಿಟ್ಟೆ ದಾಸವಾಳವು ದೇವರ ಪೂಜೆಗಿಲ್ಲದೇ ನಮ್ಮ ಹೊಟ್ಟೆಯನ್ನು ಸೇರುವ ಮಕರದಕ್ಕಾಗಿಯೇ ಮೀಸಲಿದ್ದವು.

ವರ್ಷದಲ್ಲಿ ಒಂದು ದಿನ ಮಾತ್ರ ನಾವು ನಮ್ಮ ತೋಟದ ಎಲ್ಲಾ ಹೂವುಗಳನ್ನು ಕಿತ್ತು ತರುತ್ತಿದ್ದೆವು. ಈ ಕತ್ತರಿ ದಾಸವಾಳದ ಮರವನ್ನು ಹತ್ತಿ, ಕೊಂಬೆಗಳನ್ನು ಬಗ್ಗಿಸಿ, ಒಂದೂ ಹೂವು ಉಳಿಯದಂತೆ ಮಾಡುತ್ತಿದ್ದೆವು. ದೀಪಾವಳಿ ನಂತರದ ಗೋಪೂಜೆ ದಿನ ದನಗಳನ್ನು ಮೀಯಿಸಿ, ಒಂದು ಸಣ್ಣ ತಟ್ಟೆಯನ್ನು ನೀರಾಗಿರುವ  ಗಂಧ ವಿಭೂತಿಗಳಲ್ಲಿ ಅದ್ದಿ ದನಗಳ ಮೈಯುದ್ದಕ್ಕೂ ಉರುಟುರುಟಾದ ಹಚ್ಚೆಗಳನ್ನು ಹಾಕುತ್ತಿದ್ದೆವು. ಹೂಹಾರಗಳನ್ನು ಮಾಡಿ ಇಟ್ಟು ಪೂಜೆಯ ಸಮಯದಲ್ಲಿ ಮಾತ್ರ ಅವುಗಳ ಕೊರಳಿಗೆ ಹಾಕುತ್ತಿದ್ದೆವು, ಕಾರಣ ಪೂಜೆ ಮುಗಿಯುವ ಮುನ್ನವೇ ಈ ಹೂಹಾರಗಳು ಅವುಗಳ ಬಾಯಿಯಲ್ಲಿರುತ್ತಿದ್ದವು. ಗೋಪೂಜೆಯಲ್ಲಿ ಕತ್ತರಿ ದಾಸವಾಳದ ಕರಾಮತ್ತು ಸಾಕಷ್ಟಿತ್ತು.

ಬದುಕಿನ ಎಳವೆಯಲ್ಲೇ ಸಮೃದ್ಧಿಯ ಪಾಠವನ್ನು ಕಲಿಸಿದ್ದು ಈ ಕತ್ತರಿ ದಾಸವಾಳ. ನಮ್ಮ ಇಂದಿನ ಮನೆಯ ಮೇಲಿನ ಈ ಕಾಡಿನಲ್ಲಿ ಅದು ಇಲ್ಲದಿರೆ ಹೇಗೆ. ಆದರೆ, ನಾನು ಲಾಲ್ಭಾಗಿನ ಪೂರ್ವದ ಸಿದ್ಧಾಪುರದ ಮೂಲೆಮೂಲೆಯ ನರ್ಸರಿಗಳಿಗೆ ಹೋದಾಗ, ದಾಸವಾಳಗಳ ಗಿಡ ಕಡಿಮೆ ಬೆಲೆಗೇ ಸಿಕ್ಕರೂ (ರೂ ೨೦-೪೦), ನಾನು ಕೊಳ್ಳುವ ದಾಸವಾಳ ಯಾವ ಹೂವು ಕೊಡುತ್ತದೆ ಎಂಬುದು ನರ್ಸರಿಯವನೂ ಖಚಿತವಾಗಿ ಹೇಳಲಾರ. ಹಾಗಾಗಿ ಒಂದು ಸೋಡ್ತಿಯಲ್ಲೇ ಸ್ವಲ್ಪ ಜಾಸ್ತಿನೇ ಗಿಡಗಳನ್ನು ಕಳೆದ ವರ್ಷ ತಂದು ಹಾಕಿದೆ.

ಈ ಮೇನಲ್ಲಿ ಕತ್ತರಿ ದಾಸವಾಳ ನಮ್ಮ ಕಾಡಿನಲ್ಲಿ ಅರಳಿದೆ, ಕಾಡಿನ ಸೌಂದರ್ಯಕ್ಕಿಂತ ನನ್ನ ಅಂತರಗಂಗದ ಸೌಂದರ್ಯವನ್ನು ಮತ್ತಷ್ಟು ಬೆಳಗಿದೆ. ಕಾಡಿನ ಮೂಲೆಮೂಲೆಗಳಲ್ಲಿ  ಭೂತ-ವರ್ತಮಾನ-ಹಾಗೂ ಭವಿಷ್ಯಗಳಿಗೆ ಸಾಂಗತ್ಯ ನೀಡುವ ಇನ್ನೂ ಸಾವಿರಾರು ಕಥೆಗಳನ್ನು ಪುಟ್ಟಿಸಲು ಪುಷ್ಟಿ ಕೊಟ್ಟಿದೆ.

ಈ ಕತ್ತರಿ ದಾಸವಾಳವು ನಮ್ಶ್ರಮ ಆಶ್ರಮ ಗಾರ್ಡನಿನ ಕಾಡಿನಲ್ಲಿ ಇನ್ನೂ ಹೊಸ ಹೊಸ ಕಾವ್ಯಗಳನ್ನು ಹುಟ್ಟಿಸುತ್ತಾ ಹೋಗುವತ್ತ ನನ್ನ ತಲೆಯನ್ನು ಮತ್ತಷ್ಟು ಕೆಡಿಸಿದೆ. ಕರೋನಾ ದಿಗ್ಬಂಧನ ಮುಗಿಯುತ್ತಲಿದೆ, ಸಿದ್ಧಾಪುರದ ಒಂಟಿ ನರ್ಸರಿಗಳು ಕೂಗಿ ಕರೆಯುತ್ತಿವೆ. ಹೆಚ್ಚು ಓಡದೇ, ಸರಿಯಾದ ಸ್ನಾನವಿಲ್ಲದೇ ಕಾರು ಸೊರಗಿ ಅಳುತ್ತಿದೆ, ಕಾರಿನ ಹಿಂದಿನ ಢಿಕ್ಕಿ ಮಣ್ಣಿನ ವಾಸನೆ ಇಲ್ಲದೇ  ಖಾಲಿಖಾಲಿಯಾಗಿ ಖಿನ್ನತೆಯಲ್ಲಿದೆ.

ಇವೆಲ್ಲವನ್ನೂ ಮೀರಿ ಕತ್ತರಿ ದಾಸವಾಳವು ಗಾಳಿಗೆ ಬಾಗುತ್ತಾ, ಕುಣಿಯುತ್ತಾ  ನಮ್ಮ ಕಾಡಿನ ಎಂದಿನ ನಿತ್ಯೋತ್ಸವದಲ್ಲಿ ಹೊಸ ನೃತ್ಯಪ್ರಕಾರವನ್ನೇ ಸೇರಿಸಿದೆ.

ನಮ್ಮ ವೈಯಕ್ತಿಕ ಬದುಕಿನಲ್ಲಿ ಅಳಿದು ಮಾಯವಾಗುವ ಮುನ್ನ ಈ ಕತ್ತರಿ ದಾಸವಾಳದಷ್ಟಾದರೂ ಅರಳಿ ಹೊರಳಿ ನಲಿದು ಸುತ್ತಲಿನ ನೋವು ಅಳಿಸಿ ಹೋಗುವುದು ನೋಡದೇ ಇರುವುದು ಸಾಧ್ಯವೇ?  

Monday, January 13, 2020

ಬೆಂಗಳೂರು ಬೀದಿ ನಾಯಿಗಳ ಬದುಕು – ಭಾಗ ೨




ಬೆಂಗಳೂರಿನಲ್ಲಿ ಒಂದು ಅಂದಾಜಿನ ಪ್ರಕಾರ ಇಂದು ಸುಮಾರು ೫ ಲಕ್ಷ ಬೀದಿ ನಾಯಿಗಳಿವೆ, ಅಂದರೆ ಸುಮಾರು ೨೦ ಜನರಿಗೆ ಒಂದು ಬೀದಿ ನಾಯಿ ಇದೆ. ನಮ್ಮ ಮನೆಯ  ರಸ್ತೆಯನ್ನು ಉದಾಹರಣೆಗೆ ತೆಗೆದುಕೊಂಡರೆ, ಸುಮಾರು ೪೦೦ ಮೀಟರ್‌ ಉದ್ದವಿದೆ, ಸುಮಾರು ೬೦ ಮನೆಗಳಿವೆ, ಹೆಚ್ಚಿನವು ಅಪಾರ್ಟ್ಮೆಂಟುಗಳಾಗಿವೆ, ಸರಾಸರಿ ೧೦-೧೫ ಮಂದಿಗಳಂತೆ ೬೦೦-೯೦೦ ಜನರಿದ್ದಾರೆ, ಸರಾಸರಿಯ ಪ್ರಕಾರ ಇವರ ಸುತ್ತ ೩೦-೪೫ ಬೀದಿ ನಾಯಿಗಳರ ಬಹುದಾಗಿದೆ, ಆದರೆ ನಮ್ಮಲ್ಲಿ ೧೦-೨೦ ಬೀದಿ ನಾಯಿಗಳ ಓಡಾಟ ಯಾ ಮಲಗಾಟ ಇದ್ದು ಸರಾಸರಿಗಿಂತ ಕಡಿಮೆಯೇ ಇದೆ, ಯಾಕೆ ಇದು ಹೀಗೆ?

ನಮ್ಮ ಬೆಂಗಳೂರನ್ನು ತೆಗೆದುಕೊಂಡರೆ, ಅಲ್ಲಿನ ಬಡಾವಣೆಗಳಲ್ಲಿ ಬೇರೆ ಬೇರೆ ವಿಧಗಳಿವೆ. ವಿಧಾನಸೌಧವನ್ನು ಕೇಂದ್ರವನ್ನಾಗಿ ಇಟ್ಟುಕೊಂಡರೆ, ಸುಮಾರು ೧೦ ಕಿಲೋಮೀಟರುಗಳ ತ್ರಿಜ್ಯದಲ್ಲಿ ಕೇಂದ್ರ ವ್ಯವಹಾರ ವಲಯವಿದೆ. ಆ ನಂತರ ಇನ್ನೊಂದು ಹತ್ತು ಕಿಲೋಮೀಟರುಗಳ ತನಕ ಜನರ ವಾಸ್ತವ್ಯವೇ ಮುಖ್ಯವಿದ್ದರೂ ಅಲ್ಲಿ ವ್ಯವಹಾರ ಕೇಂದ್ರಗಳು ಬೆಳೆಯುತ್ತಿವೆ. ಇಪ್ಪತ್ತು ಕಿಲೋಮೀಟರುಗಳ ತ್ರಿಜ್ಯದ ನಂತರ ನಗರದ ಹೊರವಲಯಗಳಿವೆ, ಇಲ್ಲಿ ವಾಸ್ತವ್ಯ ಹಾಗೂ ವ್ಯವಹಾರಗಳು ಏಕ ಕಾಲದಲ್ಲಿ ಬೆಳೆಯುತ್ತಿವೆ. ಅಪವಾದವೆಂಬಂತೆ ಅಲ್ಲಲ್ಲಿ ನಗರದ ಸಣ್ಣ ಕೇಂದ್ರಗಳು ಸ್ಥಾಪಿತವಾಗಿದ್ದು, ಮೇಲೆ ಹೇಳಿರುವ ಹರಡುವಿಕೆಯಲ್ಲಿ ಸ್ವಲ್ಪ ವ್ಯತ್ಯಯ ಬರುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ, ಕೇಂದ್ರ ವ್ಯವಹಾರ ವಲಯಗಳಲ್ಲಿ ಬೀದಿನಾಯಿಗಳು ಕಡಿಮೆ ಇರುತ್ತವೆ, ಮಧ್ಯದ ವಾಸ್ತವ್ಯ ವಲಯಗಳಲ್ಲಿ ಸ್ವಲ್ಪ ಹೆಚ್ಚು, ಹೊರವಲಯದಲ್ಲಿ ಅತೀ ಹೆಚ್ಚು. ಇದಕ್ಕೆ ಮತ್ತೆ ಅಪವಾದಗಳಲ್ಲಿರುತ್ತವೆ. ಉದಾಹರಣೆಗೆ ಲಾಲ್‌ ಬಾಗ್‌ ಕೇಂದ್ರ ವ್ಯವಹಾರ ವಲಯದ ತುದಿಯಲ್ಲಿ ಇದ್ದರೂ ಕೂಡಾ ಇಲ್ಲಿನ ಬೀದಿನಾಯಿಗಳ ಸಂಖ್ಯೆ ನಗರದ ಹೊರವಲಯದ ಸರಾಸರಿಯಲ್ಲಿ ಇವೆ, ಇದಕ್ಕೆ ಕಾರಣ ಇಲ್ಲಿ ಮುಕ್ತವಾಗಿ ಓಡಾಡಿಕೊಂಡಿರಲು ಅವಕಾಶ ಮತ್ತು ಬರುವ ಪ್ರವಾಸಿಗರು ಹಾಗೂ ಬೆಳಗಿನ ವ್ಯಾಯಾಮ ನಡೆಗೆ ಬರುವವರ ಉದಾರತೆಯಲ್ಲಿ ಸಿಗುವ ಆಹಾರ ವಸ್ತುಗಳು. ನಗರ ಕೇಂದ್ರದಿಂದ ತ್ರಿಜ್ಯ ಹೆಚ್ಚಿದಂತೆ ಮಾನವ ವಾಸ್ತವ್ಯದ ನೆರವು ಹೆಚ್ಚುವುದರಿಂದ, ನಾಗರಿಕ ಕಸ ಎತ್ತುವ ವ್ಯವಸ್ಥೆಯಲ್ಲಿ ಅವ್ಯವಸ್ಥೆ ಹೆಚ್ಚುವುದರಿಂದ ನಾಯಿಗಳ ಸರಾಸರಿಯೂ ಹೆಚ್ಚುತ್ತಾ ಹೋಗುತ್ತದೆ.

ನಮ್ಮ  ಬಡಾವಣೆಯು ಕೇಂದ್ರ ವ್ಯವಹಾರ ವಲಯಕ್ಕೆ ತಾಗಿಕೊಂಡಿರುವ ವಾಸ್ತವ್ಯ ವಲಯವಾಗಿದ್ದರೂ ಮೊದಮೊದಲು ಇಲ್ಲಿನ ವ್ಯವಸ್ಥೆ ಹೊರವಲಯದಂತೇ ಇತ್ತು. ಸುಮಾರು ೧೯೯೯ರ ನಂತರವೇ ನಮ್ಮ ವಾಸ್ತವ್ಯ ಜಾಗಗಳು ರೆವಿನ್ಯೂ ಖಾತೆಯಿಂದ ನಗರಪಾಲಿಕೆ ಖಾತೆಗೆ ಮಾರ್ಪಾಟಾದವು, ಅಲ್ಲಿನ ತನಕ ನಮ್ಮ ಬಡಾವಣೆ ಮಾಡುವಾಗ ಅಂದರೆ ಅದಕ್ಕಿಂತ ಸುಮಾರು ೧೫-೨೦ ವರ್ಷಗಳ ಹಿಂದಿನ ಕೆಂಪು ಮಣ್ಣಿನ ರಸ್ತೆಗಳೇ ಇದ್ದುವು, ದಿನವಿಡೀ ಇವುಗಳ ಮೇಲಿನ ವಾಹನ ಓಡಾಟಗಳಲ್ಲಿ ಹೊರಡುವ ಕೆಂಪು ಧೂಳಿಯನ್ನು ಮೂಗು ಬಾಯಿಯ ಮೂಲಕ ಸೇವಿಸಿ ನಾವು ಗಟ್ಟಿಯಾಗುತ್ತಲೇ ಬಂದಿದ್ದೆವು. ನಮಗೆ ಡಾಂಬರಿನ ರಸ್ತೆ ಬರಲು ೨೦೦೨ರ ವರೆಗೆ ಕಾದು ನೋಡಬೇಕಾಯಿತು. ಅಲ್ಲಿಯ ತನಕ ಬೀದಿಯ ಅಲ್ಲಲ್ಲಿ ಕಡಿಮೆ ಅಧಿಕೃತ, ಹೆಚ್ಚು ಅನಧಿಕೃತ ಕಸದ ತೊಟ್ಟಿಗಳಿದ್ದವು. ನಗರ ಪಾಲಿಕೆ ಇಟ್ಟಿರುವ ಒಂದು ಸಿಮೆಂಟ್ ಸಿಲಿಂಡರೇ ಅಧಿಕೃತ ಕಸದ ತೊಟ್ಟಿಯಾದರೆ, ಬೇಲಿ ಇರಲಿ, ಇಲ್ಲದಿರಲಿ, ಖಾಲಿ ಸೈಟುಗಳು, ಟ್ರಾನ್ಸ್‌ ಫಾರ್ಮರುಗಳ ಬುಡ, ನಾಲ್ಕು ರಸ್ತೆ ಸೇರುವ ಮೂಲೆಗಳು, ಒಮ್ಮೆಲೇ ರಸ್ತೆ ಸ್ವಲ್ಪ ಅಗಲವಾದರೆ ಸಿಗುವ ಹೆಚ್ಚುವರಿ ಜಾಗ ಇತ್ಯಾದಿಗಳೇ ಅನಧಿಕೃತ ಕಸದ ತೊಟ್ಟಿಗಳಾಗಿದ್ದವು. ಅಧಿಕೃತ ಕಸದತೊಟ್ಟಿಗಳು ತುಂಬಿ ಹರಿದು, ಜನರು ಆಟಗಾರನ ಕಸುವು ಹಾಗೂ ನಿಖರತೆ ಇಲ್ಲದೇ ಸುಮಾರು ೨೦ ಅಡಿಗಳ ದೂರದಿಂದಲೇ ಎಸೆಯುವ ಕಸದ ಚೀಲಗಳು ಎಲ್ಲೆಲ್ಲೋ ಬಿದ್ದು ಎರಡನೇ ಮಹಾಯುದ್ಧ ಈಗ ತಾನೇ ನಡೆದುಹೋಗಿದೆ ಎಂಬಂತಿರುತ್ತಿದ್ದವು. ಈ ಕಸದ ತೊಟ್ಟಿಗಳೇ ಬೀದಿನಾಯಿಗಳಿಗೆ ವರದಾನವಾಗಿದ್ದವು. ಅವುಗಳ ಹೊಟ್ಟೆ ತಂಬಿ ಇನ್ನೂ ಆಹಾರ ಮಿಕ್ಕುತ್ತಿತ್ತು. ಹಾಗಾಗಿ ಆಹಾರದ ಕುರಿತಾಗಿ ಅವಕ್ಕೆ ಒಂದು ರೀತಿಯ ಅಸಡ್ಡಯೇ ಇತ್ತು. ಹಗಲಿಡೀ ಅಲ್ಲಲ್ಲಿ ಬಿದ್ದುಕೊಂಡು, ರಾತ್ರಿ ಮಾತ್ರ ಆಹಾರ ತಿಂದು ಸೊಕ್ಕಿ ನಿರ್ಜನ ರಸ್ತೆಯಲ್ಲಿ ಗಸ್ತು ತಿರುಗುತ್ತಾ ಅಪರೂಪಕ್ಕೆ ಹೋಗುವ ವಾಹನ ಗಾಲಿಗಳ ವಿರುದ್ಧ ಯುದ್ಧ ಸಾರಿ ಅಟ್ಟಿಸಿಕೊಂಡು ಬಂದು ಗಲಾಟೆ ಮಾಡುತ್ತಿದ್ದವು. ರಾತ್ರಿ ಮನೆಯ ಹತ್ತಿರದ ವೃತ್ತಗಳಲ್ಲಿ ಒಮ್ಮೆಲೇ ೨೦ ನಾಯಿಗಳು ಸೇರಿರುವುದನ್ನು ನೋಡುವ ಭಾಗ್ಯ ೨೦೦೩ರ ವರೆಗೂ ನನಗಿತ್ತು, ಎಲಾ ನಾಯಿಗಳನ್ನು ಲೆಕ್ಕ ಮಾಡುತ್ತಾ ವಾಹನ ಯಾಕೆ ಚಲಾಯಿಸಿದ ಎಂದು ನೀವು ಕೇಳಬಹುದು, ಮುಂದೆ ಉತ್ತರ ಸಿಕ್ಕೇ ಸಿಗುತ್ತದೆ.

ನಾಯಿಗಳು ರಾತ್ರಿ ವಾಹನದ ಹಿಂದೆ ಬೊಗಳುತ್ತಾ ಬಂದರೆ ರಸ್ತೆಯಲ್ಲಿ ನಡೆಯುವರು ಹಾಗೂ ದ್ವಿಚಕ್ರವಾಹನ ಸವಾರರು ಕಚ್ಚುವುದೆಂದು ಹೆದರುವುದಿದೆ, ಹೆದರುವುದು ಅನಾವಶ್ಯಕ. ನಾಯಿಗಳ ದ್ವೇ಼ಷ ನಿಮ್ಮ ಮೇಲಲ್ಲ, ನಿಮ್ಮ ವಾಹನದ ಮೇಲಲ್ಲ, ಬರೇ ವಾಹನದ ಚಕ್ರಗಳ ಮೇಲೆ.  ಒಮ್ಮೆ ವಾಹನ ನಿಲ್ಲಿಸಿ ನೋಡಿ, ಚಕ್ರಗಳತ್ತ ಬೊಗಳುತ್ತಾ ಇರುತ್ತವೆ. ಇದಕ್ಕೆ ಕಾರಣ, ಎಷ್ಟೋ ಬೀದಿ ನಾಯಿಗಳು ವಾಹನ ಚಕ್ರಗಳ ಅಡಿಯಲ್ಲಿ ಸಿಕ್ಕು ಸತ್ತಿವೆ ಇಲ್ಲಾ ಮಾರಣಾಂತಿಕವಾಗಿ ಗಾಯಗೊಂಡಿವೆ. ರಾತ್ರಿ ನಾಯಿಗಳ ದರ್ಬಾರು ನಡೆಯುತ್ತಿರುವಾಗ, ಹಿಂದಿನ ಕಹಿ ನೆನಪುಗಳ ಮಧ್ಯೆ ಒಂದು ಧಿಕ್ಕಾರದ ಘೋಷಣೆಯನ್ನು ಕೂಗಿ ತಮ್ಮ ತಮ್ಮ ಆತ್ಮ ಬಲವನ್ನು ಹೆಚ್ಚಿಸಿಕೊಳ್ಳುವ ಅವುಗಳ ಪ್ರಾಮಾಣಿಕ ಪ್ರಯತ್ನವಷ್ಟೇ.  ಅಪರೂಪಕ್ಕೆ ನಾಯಿಗಳು ಮನುಷ್ಯರನ್ನು ಕಚ್ಚುತ್ತವೆ, ಎರಡು ಕಾರಣಗಳಿಗಾಗಿ. ಒಂದು ಎದುರಿಗಿನ ಮನುಷ್ಯ ಹೆದರಿದರೆ ಆತ ತಮಗಿಂತ ಕಡೆ ಎಂಬ ನಿರ್ಧಾರದಲ್ಲಿ, ಇನ್ನೊಂದು ತಮ್ಮಷ್ಟೇ ಉದ್ದಕ್ಕಿರುವ ಮಕ್ಕಳು ಸುಲಭ ಧಾಳಿಗೆ ಸಿಗುವರೆಂದು. ಅದೂ ಇವೆರೆಡು ಕಾರಣಗಳಿದ್ದರೂ ನಾಯಿಗಳು ಹಸಿವು ಅತಿಯಾಗಿದ್ದರೆ ಮಾತ್ರ ಮನುಷ್ಯತ್ವದ ಲೆಕ್ಕಾಚಾರವನ್ನು ಮೀರಿದ ಅವುಗಳ ಪಶುತ್ವ ಮೆರೆಯುತ್ತದೆ. ಅದಕ್ಕಾಗಿಯೇ ನನ್ನ ವಾದ, ಬೀದಿನಾಯಿಗಳನ್ನು ಹುಟ್ಟಲು ಅವಕಾಶ ಕೊಡಬೇಡಿ, ಹುಟ್ಟಿಸಿದ ಮೇಲೆ ಆಹಾರ ಕೊಡದೇ ಹಸಿವಿನಲ್ಲಿ ಬಿಡಬೇಡಿ ಎಂಬುದಾಗಿ.

೨೦೦೨ರ ನಂತರ ನಮ್ಮಲ್ಲಿ ಕೆಂಪು ರಸ್ತೆ ಹೋಗಿ ಕಪ್ಪು ಡಾಂಬರ್‌ ರಸ್ತೆ ಬಂದಾಗ ನಾವೆಲ್ಲಾ ಇನ್ನು ಕೆಂಪು ಧೂಳಿಯನ್ನು ಮನೆಯಲ್ಲಿ ಒರೆಸುವ ಕೆಲಸ ಕಡಿಮೆ ಎಂದು ಕುಪ್ಪಳಿಸಿದೆವು. ಆದರೆ ಬಡಾವಣೆ ಬೆಳೆದು ಮನೆಗಳು ಹೆಚ್ಚಿ ವಾಹನ ಓಡಾಟ ಅತಿಯಾಗಿ ಬೇರೆ ಬಣ್ಣದ ಧೂಳಿ ಒಂದೆಡೆಯಾದರೆ ಮನೆಗಳನ್ನು ಕಟ್ಟುವಾಗ ಹರಡುವ ಮಣ್ಣು ಹಾಗೂ ಸಿಮೆಂಟಿನ ಧೂಳಿಯು ವಾಹನ ಹೋಗುವಾಗ ಹರಡುತ್ತಾ ಧೂಳನ್ನು ತಿನ್ನುತ್ತಾ ನಾವು ಇನ್ನೂ ಗಟ್ಟಿಯಾಗುತ್ತಲೇ ಬಂದೆವು. ಇಂದಿಗೂ ನಾನು ಬರೆಯಲು ಉಪಯೋಗಿಸುವ ಮೇಜನ್ನು ಎರಡು ದಿನ ಒರೆಸದಿದ್ದರೆ, ಮೂರನೇ ದಿನ ತೆಳ್ಳಗಿನ ಧೂಳಿನ ಮೇಲೆ ಚಿತ್ತಾರಗಳನ್ನು ಬಿಡಿಸುವ ಭಾಗ್ಯ ನನ್ನದಿರುತ್ತದೆ. ನಾನು ಮಾತ್ರ ಮನೆಯ ಸುತ್ತ ಕಾಡನ್ನು ಹೆಚ್ಚಿಸಿ ಈ ಧೂಳನ್ನು ಸುಮಾರು ಕಡಿಮೆ ಮಾಡಿಕೊಂಡು ಈಗ ಚಿತ್ತಾರಗಳನ್ನು ಬರೆಯಲು ಒಂದು ವಾರವೇ ಕಾಯಬೇಕಾಗುತ್ತದೆ ಅನ್ನಿ.

೨೦೦೨ರಲ್ಲಿ ಡಾಂಬರ್‌ ರಸ್ತೆ ಬಂದ ನಂತರ, ೨೦೦೩ರಲ್ಲಿ ಬೆಂಗಳೂರು ನಗರ ಪಾಲಿಕೆಯವರು ವಿಶ್ವ ಬ್ಯಾಂಕಿನ ಸಾಲದ ಆಧಾರದಲ್ಲಿ (ಸುಮಾರು ರೂಪಾಯಿ ೩,೦೦೦ಕೋಟಿಗಳ ವೆಚ್ಚ) ಬೆಂಗಳೂರಿನ ಮೂಲೆಮೂಲೆಗಳ್ಲಿ ಸ್ಯಾನಿಟರಿ ಪೈಪುಗಳನ್ನು ಹಾಕಿಸುವ ಯೋಜನೆ ಬಂತು, ಅಲ್ಲಿಯವರೆಗೆ ನಮ್ಮಂತಹ ರೆವಿನ್ಯೂ ಬಡಾವಣೆಗಳಲ್ಲಿ ಹೌದೋ ಅಲ್ಲವೋ ಎಂಬಂತೆ ಕೆಲಸ ಮಾಡುವ, ಆಗಾಗ ತುಂಬಿ ಹರಿಯದೇ ಇರುವ, ಸುಮಾರು ೨೫ ವರ್ಷಗಳ ಹಿಂದಿನ ಕೆಲವೇ ಮನೆಗಳಿಗೆ ಬೇಕಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಹಾಕಿದ ಸಪೂರ ಮಣ್ಣಿನ ಪೈಪುಗಳೇ ಇದ್ದು, ಎಷ್ಟೋ ಮನೆಯವರು ತುಂಬಿ ಹರಿಯದಾಗ ಚರಂಡಿಗೇ ಎಲ್ಲಾ ಬಿಟ್ಟು ನಾತಗಳ ಮಧ್ಯೆ ನಾಥನನ್ನು ಬೇಡುತ್ತಾ ಸಾಗುವ ಪಾಡು ನಮ್ಮದಿತ್ತು. ಈ ಯೋಜನೆಯ ಆದ ಕೂಡಲೇ ಸುಮಾರು ೨೦೦೫ರ ಹಾಗೆ ಸಾರ್ವಜನಿಕ ತಿಪ್ಪೇಗುಂಡಿಗಳು ಮಾಯವಾಗತೊಡಗಿದವು, ಕಾರಣ ನಗರಪಾಲಿಕೆಯವರು ಬಂದು ಕಸವನ್ನು ಎತ್ತುವುದೂ ಸಾಮಾನ್ಯವಾಗತೊಡಗಿತು. ಈ ಮಧ್ಯೆ ಖಾಲಿ ಸೈಟುಗಳೂ ಮಾಯವಾಗತೊಡಗಿದವು. ನಮ್ಮ ಬಡಾವಣೆಯಲ್ಲಿ ಬೀದಿನಾಯಿಗಳ ಸುವರ್ಣಯುಗ ಮುಗಿಯುತ್ತಾ ಬಂದಿತು. ಆದರೆ ನಮಗಿಂತ ಕಿಲೋಮೀಟರುಗಳ ದೂರದ ಹೊರವಲಯಕ್ಕೆ ಈ ಸುವರ್ಣಯುಗವು ವರ್ಗಾಯಿತವಾಗಿದೆ ಎಂಬಲ್ಲಿ ಯಾವುದೇ ಸಂಶಯ ಬೇಡ.

ಆದರೂ ನಮ್ಮ ಬಡಾವಣೆಯಲ್ಲಿ ೩೦ ಪ್ರತಿಶತ ನಾಯಿಗಳು ಉಳಿದವು. ಕಾರಣ, ೨೫-೫೦ ವರ್ಷಗಳಿಂದ ಬೀದಿಗೇ ಕಸ ಎಸೆಯುವ ಮಂದಿ, ಈ ಸ್ವಚ್ಛಂದದ ಆಟವನ್ನು ಬಿಡಲಾರರಾದರು. ಬೆಳಿಗ್ಗೆ ವಾಕಿಂಗ್‌ ಹೋಗುವಾಗ ತಮ್ಮದಲ್ಲದ ಯಾವುದೋ ರಸ್ತೆಯ ಮೂಲೆಯಲ್ಲಿ ಕಸ ಎಸೆಯುವ ಕ್ರೀಡೆಯನ್ನು ಬಿಡಲಾಗದವರಾದರು. ಮನೆಯಲ್ಲಿ ಇಬ್ಬರೂ ಕೆಲಸಕ್ಕೆ ಹೋಗುವರಾದರೆ, ಕಸದ ಮಂದಿ ಬಂದಾಗ ಕಸ ಕೊಡಲು ಇರುವುದಿಲ್ಲ, ಆದರೆ ತಮ್ಮ ಮನೆಗಳ ಮುಂದೆಯೇ ಕಸ ಇಟ್ಟುಹೋಗುವುದು ಸಲ್ಲ ಎಂದು ಎರಡು, ಮೂರು, ನಾಲ್ಕು ಚಕ್ರಗಳಲ್ಲಿ ಕಸದ ಚೀಲವನ್ನು ಹೊತ್ತು ಚಕ್ಕನೇ ಎಸೆದು ಹೋಗುವ ಅಪೂರ್ವ ಕ್ರೀಡೆ ಈಗಲೂ ನಡೆಯುತ್ತಿದೆ. ಕೆಳಗಿನ ಬಡಾವಣೆಯವರು ಮೇಲಿನ ನಮ್ಮ ಬಡಾವಣೆಗೆ ಕಸದವರು ಬರುವುದು ಹೆಚ್ಚು ಬಾರಿ ಎಂದು ನಾಲ್ಕು ರಸ್ತೆ ಸೇರುವಲ್ಲಿ ಹಾಕಿ ಹೋಗುವುದು ಗುಡ್ಡೆಗಳಾಗಿ, ಬೀದಿ ನಾಯಿಗಳ ಆಶಾವಾದಕ್ಕೆ ಇಂದಿಗೂ ಯಾವುದೇ ತೊಡಕಾಗಿಲ್ಲ. ರಾತ್ರಿ ದರ್ಬಾರಿನಲ್ಲಿ ಪ್ರತೀ ಕಸದ ಚೀಲವನ್ನು ಸೀಳಿ ಒಳಗಿದ್ದುದನ್ನು ತಿನ್ನುವ ಗಡಿಬಿಡಿಯಲ್ಲಿ ಈ ಕಸದ ಮೂಟೆಗಳು ಸುಮಾರು ೫೦ ಅಡಿಗಳ ತನಕ ಹರಡಿ, ಅದರೊಳಗದ್ದದ್ದೂ ಎಲ್ಲಾ ಕಡೆ ಬಿಕ್ಕಿ, ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ನಮ್ಮ ರಸ್ತೆ ವೈಭವಗಳು ಈಗಲೂ ಅಲ್ಲಲ್ಲಿ ಮುಂದುವರೆಯುತ್ತಿದೆ. ಬೆಳಿಗ್ಗೆ ಪೇಪರ್‌ ಪಡೆಯಲು ಗೇಟ್‌ ಹತ್ತಿರ ಬಂದಾಗ, ನಮ್ಮ ಮನೆಯ ಸುತ್ತ  ನಾಯಿಗಳು ಹರಿದು ತಿಂದು ಉಳಿದ ಸಣ್ಣ ಮಕ್ಕಳ ಡೈಪರುಗಳು (ತಾತ್ಕಾಲಿಕ ಒಳಚಡ್ಡಿಗಳು) ಹರಡಿದುದ ನೋಡಿ, ನಗುವುದೂ ಅಳುವುದೂ ಎರಡೂ ಸಾಧ್ಯವಾಗದೇ, ಎಲ್ಲೆಂದರಲ್ಲಿ ಕಸ ಎಸೆಯುವ ನಾಯಿಗಳಿಂತ ಕಡೆಯಾದ ಈ ಮನುಷ್ಯರ ಮಧ್ಯೆ ಈ ನಾಯಿಗಳಿಗೆ ಊಟವಿಟ್ಟು ಅವನ್ನು ಮೇಲೆತ್ತುವುದೇ ಲೇಸೆನ್ನಿಸುತ್ತದೆ.

ನಾವೀಗ ನಾಯಿಗಳ ಸುವರ್ಣಯುಗಕ್ಕೆ ವಾಪಾಸಾಗೋಣ. ನಮ್ಮ ಮಕ್ಕಳೂ ಸಣ್ಣವರಿದ್ದರು, ಪ್ರತೀ ಬಾರಿಯ ಕಾರಿನ ಪ್ರಯಾಣದ ಸಮಯವೇ ನನಗೆ ಅವರೊಂದಿಗೆ ಆಡಿ ಹಾಡುವುದೇ ಸಮಯದ ಸದುಪಯೋಗವಿತ್ತು. ಇತ್ತ ರಸ್ತೆಯ ಮೇಲೆ ಕಣ್ಣಿಟ್ಟೇ ನನ್ನ ಆಟಗಳು ನಡೆಯಬೇಕಿತ್ತು. ರಸ್ತೆಯನ್ನು ನೋಡುತ್ತಾ ಹೋಗುವಾಗ, ಅಲ್ಲಲ್ಲಿ ನಾಯಿಗಳು ಇಲ್ಲದೇ, ಒಮ್ಮೆಲೇ ಹೆಚಾಗುವುದನ್ನೂ ಗಮನಿಸಿದ್ದೆ, ಹಗಲಿಗಿಂತ ರಾತ್ರಿ ನಾಯಿಗಳ ಸಂತೆ ಹೆಚ್ಚುವುದನ್ನೂ ನೋಡಿದೆ. ಹೀಗೆ ದೇಶ ಮತ್ತು ಕಾಲ ಬದಲಾದಂತೆ ನಾಯಿಗಳ ಸಂಖ್ಯೆ ಬದಲಾಗುವುದೇ ಒಂದು ಆಟದ ಅವಕಾಶವಾಯಿತು. ನಮ್ಮ ಕಾರು ಒಂದು ಕಡೆಯಿಂದ ಹೊರಟು ಇನ್ನೊಂದು ಕಡೆ ತಲುಪುವಾಗ ಸುಮಾರು ೫-೧೫ ಕಿಲೋಮೀಟರಗುಳ ದಾರಿಯಲ್ಲಿ ಎಷ್ಟು ನಾಯಿಗಳು ಸಿಗುತ್ತವೆ ಎಂಬ ಅಂದಾಜು ಹಾಕಿ, ಯಾರ ಅಂದಾಜು ವಾಸ್ತವಕ್ಕೆ ಅತೀ ಹತ್ತಿರವಾಗುತ್ತದೆ ಎಂಬುದೇ ನಾವಾಡುವ ಆಟ. ಒಬ್ಬ ಮಗಳು ರಸ್ತೆಯ ಒಂದು ಬದಿ ನೋಡುತ್ತಾ ಹೋಗಬೇಕು, ಇನ್ನೊಂದು ಮಗಳು ರಸ್ತೆಯ ಇನ್ನೊಂದು ಬದಿ ನೋಡಬೇಕು, ನಾನೋ ೨೦-೨೦ರ ದೃಷ್ಟಿಯ ನನ್ನದೇ ನೋಟದಲ್ಲಿ ಅವರು ತಪ್ಪಿಸಿಕೊಂಡದ್ದನ್ನೂ ನೋಡಲು ಯೋಗ್ಯನಾಗಿದ್ದೆ. ಕೆಲವೊಮ್ಮೆ ಬರೇ ವ್ಯವಹಾರ ಕೇಂದ್ರಗಳ ವಲಯದಲ್ಲಿ ನಾಯಿಗಳು ಲೆಕ್ಕಕ್ಕೆ ಸಿಗದೇ ಒಮ್ಮೆಲೇ ಒಂದು ದೊಡ್ಡ ಕಸದ ತೊಟ್ಟಿಯ ಸುತ್ತ ೧೫-೨೦ ನಾಯಿಗಳು ಧುತ್ತನೇ ಸಿಕ್ಕಿ ಸರಿಯಾಗಿ ಲೆಕ್ಕ ಮಾಡುವ ಮೊದಲೇ ಕಾರು ಮುಂದೆ ಹೋಗಿ ನಮ್ಮ ನಮ್ಮ ಸೂರ್ಗೋಳಿ ಲೆಕ್ಕಗಳ ಸಮನ್ವಯದ ಸಂವಾದ ನಡೆಯುತ್ತಿರುವಾಗಲೇ ಮತ್ತೊಂದು ನಾಯಿಗಳ ಸಮ್ಮೇಳನ ಎದುರಾಗಿ ಕಾರಿನೊಳಗಿನ ಎಲ್ಲರ ಇಂದ್ರಿಯಗಳ ಕೆಲಸವು ತಾರಕಕ್ಕೇರಿ ದಾರಿ ನಡೆದುದೇ ಗೊತ್ತಾಗುತ್ತಿರಲಿಲ್ಲ. ರಾತ್ರಿ ಪ್ರಯಾಣವಾದರೆ, ಹತ್ತು ಗಂಟೆಯ ನಂತರ ನಾಯಿಗಳ ಮೆರವಣಿಗೆ ಹೊರಡುವುದರಿಂದ ಆಯಾ ಬದಿಯ ಕಿಟಕಿಯವರಿಗೆ ಲೆಕ್ಕ ಮಾಡುವುದೇ ಕಷ್ಟವಾಗಿ, ನಾನು ಇಬ್ಬರ ಲೆಕ್ಕವನ್ನೂ ಸರಿಮಾಡುವತ್ತ ಕಾರ್ಟೂನು ಕ್ಯಾರೆಕ್ಟರಿನವ ಕಣ್ಣು ಹೊರಳಿಸಿದಂತೆ ಹೊರಳಿಸುತ್ತಾ ಹೋಗಿ, ಯಾವುದೇ ಆಕ್ಸಿಡೆಂಟು ಆಗದೇ ಇರುವುದೇ ದೇವರ ಅಸ್ತಿತ್ವಕ್ಕೆ ಪುರಾವೆಯೇ ಎಂದು ಪ್ರಶ್ನಿಸುವಂತಾಯಿತು. ರಾತ್ರಿ ಪ್ರಯಾಣದಲ್ಲಿ ಹಗಲು ಲೆಕ್ಕಾಚಾರದವರ ನಾಯಿಗಳ ಅಂದಾಜು ನಗೆಪಾಟಲಿಗೆ ಈಡಾದರೆ, ಈ ಸೋಲಿನ ಕಾರಣ ಮುಂದಿನ ಹಗಲಿನಲ್ಲಿ ರಾತ್ರಿಯ ಲೆಕ್ಕವಿಟ್ಟವರು ಮತ್ತೆ ಸೋತು ಅಂದಾಜು ಮತ್ತು ವಾಸ್ತವಗಳ ಮಧ್ಯೆ ಜೀವನವನ್ನು ಆಟದಂತೆ ಮುನ್ನಡೆಸಬೇಕೆನ್ನುವ ಪಾಠವಂತೂ ನಮ್ಮ ಮಕ್ಕಳಿಗೆ ಗಟ್ಟಿಯಾಗುತ್ತಾ ಹೋಯಿತು. ಇತ್ತ ಸುಮಾರು ಹತ್ತು ಕಿಲೋಮೀಟರುಗಳ ದೂರದಲ್ಲಿ ೧೫೦ಷ್ಟು ಸಿಗುವ ನಾಯಿಗಳ ಸಂಖ್ಯೆ ಕ್ರಮೇಣ ಹತ್ತಿಪ್ಪತ್ತಕ್ಕೂ ಕಡಿಮೆ ಇಳಿದು ಆಟದ ಮಜ ಕಡಿಮೆಯಾಗತೊಡಗಿತು. ಹಾಗಾಗಿ ಬದಲಿಗೆ ದನಗಳ ಸಂಖ್ಯೆ, ಒಂದೇ ಮಾದರಿಯ ಕಾರುಗಳ ಸಂಖ್ಯೆ, ರಾತ್ರಿ ಹೋಗುವ ಒಕ್ಕಣ್ಣಿನ ಕಾರುಗಳ ಸಂಖ್ಯೆ (ಎದುರಿನ ಒಂದು ದೀಪದ ಬಲ್ಬ್‌ ಕೆಲಸ ಮಾಡದಿರುವುದು) ಹೀಗೆ ಬೇರೆ ಬೇರೆ ಅಂಕಿಅಂಶಗಳ ಸುತ್ತ ಈ ಅಂದಾಜುಗಳ ಆಟ ಸ್ವಲ್ಪ ಕಾಲ ಮುಂದುವರೆದರೂ ಈ ನಾಯಿಗಳು ಕೊಟ್ಟ ಮಜ ಬೇರೆಯದು ಕೊಡಲಾಗಲಿಲ್ಲ. ಇತ್ತ ನನ್ನ ಮಕ್ಕಳು ಈ ಆಟದಲ್ಲಿ ನನ್ನನ್ನೇ ಸೋಲಿಸುವಷ್ಟು ಗಟ್ಟಿಯಾಗುವಾಗ ಅವರನ್ನು ಹೆದ್ದಾರಿಯ ಮಾರ್ಗದಲ್ಲಿ ಇದೇ ಆಟಕ್ಕೆ ಎಳೆದೆ. ಬೆಂಗಳೂರಿನ ರಸ್ತೆಯ ಲೆಕ್ಕಾಚಾರಕ್ಕೆ ವಿರುದ್ಧವಾದ ಅಲ್ಲಿನ ಲೆಕ್ಕಾಚಾರ, ಹೆಚ್ಚಿನ ವೇಗದಲ್ಲಿ ಕಾರು ಹೋಗುವುದರಿಂದ ನಾಯಿಗಳ ಗುಂಪೇ ಸಿಕ್ಕರೆ ಲೆಕ್ಕವೇ ಅಡಿಮೇಲಾಗುವುದು, ಹೆದ್ದಾರಿಯ ಅತಿವೇಗದಲ್ಲಿ ಕಣ್ಣು ಹಾಯಿಸುವ ಅಪಾಯ ಬೇಡವೆಂದು ಎರಡು ಬದಿಗಳ ಕಿಟಕಿಗಳ ಮೂಲಕ ಮಕ್ಕಳು ಕೊಡುವ ಲೆಕ್ಕವೇ ಅಂತಿಮವಾಗಿ ಒಬ್ಬರನ್ನೊಬ್ಬರು ನಂಬುವುದು, ನಂಬುವಂತೆ ಬದುಕುವುದು ಗಟ್ಟಿಯಾಗುತ್ತಾ ಹೋಯಿತು. ಮೊದಮೊದಲು ಹೆದ್ದಾರಿಯಲ್ಲಿ ಬೇರೆಯೇ ಅಂದಾಜು ಬೇಕಾದ ಕಾರಣ ನಾನೇ ಗೆಲ್ಲುತ್ತಾ ಹೋದರೂ ಕ್ರಮೇಣ ನನ್ನ ಮಕ್ಕಳಿಗೇ ನಾವಿಬ್ಬರೂ ದೊಡ್ಡವರು ಸೋಲತೊಡಗಿದ್ದು ಖುಷಿಯನ್ನೇ ಕೊಟ್ಟಿತು. ಅಪ್ಪ ಅಮ್ಮರನ್ನೇ ಪದೇಪದೇ ಸೋಲಿಸಲು ಸಾಧ್ಯ ಎಂಬುದು ಗಟ್ಟಿಯಾದ ಮೇಲೆ ಮಕ್ಕಳಿಗೂ ಈ ಆಟದ ಮಜ ಕಡಿಮೆಯಾಗತೊಡಗಿತು, ಕಿವಿಗೆ ಹೂವಿಟ್ಟಂತೆ ಫೋನಿನ ಇಯರು ಪೋನುಗಳು ಬಂದು ಸೇರಿ ಬೇರೆ ಆಟಗಳೇ ನಿಂತವು, ಇತ್ತ ಒಬ್ಬಂಟಿಯಾಗಿ ಕಾರು ಬಿಡುವ ನಾನು ಬದಲಾಗುತ್ತಿರುವ ಪ್ರಪಂಚದಲ್ಲಿ ನಾಯಿಗಳಿಗೂ ಹಾಗೂ ನಾವುಗಳಿಗೂ ಹೆಚ್ಚೇನೂ ವ್ಯತ್ಯಯ ಇಲ್ಲದಿರುವ ವಾಸ್ತವಗಳ ಸುತ್ತ ಹೊಸ ತತ್ವಜ್ಞಾನಗಳ ಸುಳಿವನ್ನು ಜಾನಿಸುವುದೇ ಜಾಸ್ತಿಯಾಗುತ್ತಾ ಬಂತು.

ಮುಂದಿನ ಸಂಚಿಕೆಯಲ್ಲಿ ಈ ಬೀದಿ ನಾಯಿಗಳ ಸಾಮಾಜಿಕ ವ್ಯವಸ್ಥೆಯ ಬಗ್ಗೆ ನಾ ಕಂಡುಕೊಂಡುದರ ಬಗ್ಗೆ  ಬರೆಯುವೆ.   

ನಮಸ್ತೆ

ನಟರಾಜ ಉಪಾಧ್ಯ